Wednesday, January 24, 2024

ಅರಿತರೆ ಸ್ವರ್ಗ ಮರೆತರೆ ನರಕ

ಅರಿತರೆ ಸ್ವರ್ಗ ಮರೆತರೆ ನರಕ

ಮಾನವ ಪೀಳಿಗೆಗಳು 
ಸ್ಮರಿಸಬಹುದಾದ 
ಮಹತ್ವಪೂರ್ಣ ಘಟನೆಗಳೆ ಇತಿಹಾಸ, 
ಎಂದ ಗ್ರೀಸ್ ನ ಹೆರೋಡೋಟಸ್.
ಸ್ಮರಿಸಲು ಯೋಗ್ಯವಲ್ಲದ 
ಸಂಗತಿಗಳಿಗೆ ಯಾಕಾಗಿ ಇಷ್ಟು ಸಂಕಷ್ಟ?
ಇತಿಹಾಸದ ಸಂಗತಿಗಳು 
ಹಿಯಾಳಿಸಲು ಅಲ್ಲ, 
ಸ್ವಾರ್ಥಕ್ಕಾಗಿ ಸಮರ್ಥಿಸಲೂ ಅಲ್ಲ. 
ಅವು ತಮ್ಮಷ್ಟಕ್ಕೆ ತಾವು 
ನಡೆದ ಘಟನೆಗಳು ಅಷ್ಟೆ.
ಅವು ನಮ್ಮ ಪೂರ್ವಜರ 
ಹೆಜ್ಜೆಗುರುತುಗಳು .
ಅವು ನಮಗೆಲ್ಲ ದಾರಿಗಳು 
ನಡೆದು ಹೋಗಬೇಕಷ್ಟೆ 
ಮಾರ್ಗದರ್ಶಿ ಬೋರ್ಡ, ತಿದ್ದಲಲ್ಲ. 
ತಿರುಚುವುದಲ್ಲ, ಅರಚುವುದೂ ಅಲ್ಲ. 
ಇತಿಹಾಸ ಓದಿದವನ ಮಾತನೊಮ್ಮೆ 
ಕೇಳಿ.... ಇತಿಹಾಸ ಓದದೆ ಅದನ್ನು ವ್ಯಾಖ್ಯಾನಿಸುವುದು ಅಪಾಯಕಾರಿ.
ಕ್ರೂರಿಯಾದವನ ವಂಶಜರೆಲ್ಲ 
ಶತೃಗಳೂ ಅಲ್ಲ 
ಸಾಧಕರ ಸಂತತಿಗಳೆಲ್ಲ 
ಶಾಂತಿಯ ಸೌಧ ಕಟ್ಟುವ ಮಹಾಮಹಿಮರಾಗಬೇಕೆಂದಿಲ್ಲ.
ಸಾಧಕರ ದಾರಿಯಲ್ಲಿ 
ಇರಬೇಕು ನಾವೆಲ್ಲ.
ನಡೆದುದೆಲ್ಲವೂ ಇತಿಹಾಸವಲ್ಲ
ಬದುಕು ಹಸನು ಮಾಡಲು ಹೊಸೆಯಬಹುದಾದ ಸಂಗತಿಗಳೆ 
ಇತಿಹಾಸ.ತಿಳಿದರೆ ಮಂದಹಾಸ
ಇಲ್ಲದಿದ್ದರೆ ಸರ್ವನಾಶ.
ಜಾಗತಿಕ ಯುದ್ಧಗಳ ಪಾಠ 
ಓದಿಯೂ ಮಾಡಬಾರದು 
ಸಬಲರು ಬಗ್ಗಿಸುವ ಹಠ
ಮಾಡಿದರೆ ಮಣ್ಣಾಗುವುದು ದಿಟ
ಜಗತ್ತೆ ನಡುಗಿಸಿದ ಮುಸೋಲಿನ್
ತನ್ನವರಿಂದಲೆ ಆದ ಹತ್ಯೆ
ತನ್ನ ಜನಾಂಗವೆ ಶ್ರೇಷ್ಠವೆಂದ
ಹಿಟ್ಲರ್ ಮಾಡಿಕಂಡ ಆತ್ಮಹತ್ಯೆ.

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...