Tuesday, January 30, 2024

ಆರಾಧನೆ

ಆರಾಧನೆ

ಪ್ರಭು ರಾಮದೇವ, ಆರಾಧ್ಯದೈವ
ಪ್ರಭೆಯೊಂದೆ ನೈತಿಕತೆಯು
ಪ್ರಭುವೆ ನೀ ಆಸ್ತಿಕರ ಜೀವಾಳ |

ನೀ ಬಿತ್ತಿದ ಬೀಜಗಳು ಹುಟ್ಟಿದವೆಷ್ಟೊ 
ಅದರಲ್ಲಿ ಬೆಳೆದವೆಷ್ಟೊ
ಅಲ್ಲಲ್ಲಿ ಚಿಗುರೊಡೆದ ಮೊಗ್ಗುಗಳು 
ಮುತ್ತಿನ ಹನಿಗಾಗಿ ತತ್ತರ
ಕಾಯ್ದವರ ಚಿಂತೆ ನಾನರಿಯೇ|

ಬೆಳೆವ ಪುಷ್ಪಗಳ ಮಧ್ಯೆ ಕಳೆಗಳೆ 
ತುಂಬಿವೆ ಹೊಳೆಯುವ ಕೀಟಗಳು 
ಸ್ನೇಹಿತರಂತೆ ನಟಿಸಿಮಿಡಿಗಾಯಿ ತಿಂದರೆ 
ಬೆಳೆ ಬೆಳೆಯುವುದೆ ಚಿಂತೆ
ಮಾಲಿಗಳ ಕಷ್ಟ ನಾನರಿಯೇ |

ವೇದನೆಯು ಮರೆಯಲು 
ಮೌನದ ಮೊರೆ ಹೋದ
ಸಾದುವಿಗೂ ಗದ್ದಲದ ಚಿಂತೆ
ಸದ್ಗುರುವಿನ ಸಂಕಟ ನಾನರಿಯೇ|

ಮಾನವನಾ, ದೇವರಾ ನಮಗೇಕೆ 
ಬೇಕದರ ಸಂತೆ 
ನಡೆದು ಕೈವಲ್ಯ ಪಡೆದವನೆ ದೇವ 
ದೈವತ್ವಕ್ಕೇರಿದ ಭಾವ ಶಾಂತಿ ನೀಡಿದರೆ 
ಭುವಿಯ ಸಂಕಟ ನಾನರಿಯೇ |

ನಮಗಿಲ್ಲ ನೀ ಬಿತ್ತಿದಾ ಮೌಲ್ಯಗಳ ಚಿಂತೆ
ನೆತ್ತಿಯ ಮೇಲಿನ ಹುಸಿ ಛಾಯೆ 
ಹೊತ್ತು ತಂದವರ ಜರಿದರೆ 
ಪಿತ್ತ ನೆತ್ತಿಗೇರುವುದು ನಾನರಿಯೇ|

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...