Saturday, January 20, 2024

* ರಾಮನಾಮ ಭಾರತ *

ಭರತ ಭೂಮಿ ನಿನ್ನ ಮಹಿಮೆ 
ನಮಗೆ ವರ್ಣಿಸಲಸದಳ ।
ಭವ್ಯಪರಂಪರೆ ರಾಮನಾಮ
ನಮ್ಮೆಲ್ಲರ ಹಿರಿಮೆಯು ಅನುದಿನ॥

ಭರತ ಲಕ್ಷ್ಮಣ  ಸಹೋದರ ಗುಣ
ಸತಿ,ಸೀತೆಯ ಪಾವಿತ್ರ್ಯದ ಪಣ।
ಸಾಗುತಿಹುದು ರಾಮನ ರಾಜ್ಯ 
ಭಾರತ ಮಾತೆಯ ಆಶಾಭಾವ ಕ್ಷಣ ಕ್ಷಣ॥

ರಾಮನಸ್ಮಿತೆ ಪಡೆದ ಭರತಭೂಮಿ 
ನಿನಗಿದೋ ನರರ ಶಿರಬಾಗಿದ ನಮನ।
ಪಿತೃ ವಾಕ್ಯ ಪರಿಪಾಲನೆ ಮಂತ್ರ ಒಂದೇ 
ಅಖಂಡ ಜಂಭೂ ದ್ವೀಪದ ಕಣ ಕಣ॥

ಪಾದರಾಕ್ಷೆ ತಲೆಯ ಮಾಲೆ 
ಪ್ರಜಾಸೇವೆ ತೂಗುವ ಉಯ್ಯಾಲೆ।
ಎದೆಬಗೆದು ಭಕ್ತಿಯ ಮಂದಿರ ತೋರಿದ 
ಹನುಮ ಕೊಂಡಿಯೇ ಭಾರತೀಯ॥

ಸತಿ ಸುತರು ಗತಿಯಲಿರಲು
ಪತಿ ಆದರ್ಶ ಗುಣವೆ ಗಗಣ।
ಸರಯೂ ನದಿಯೀಗ ಕಾದಿದೆ
ಇಕ್ಷು ಕುಲ ರಾಮ ಪ್ರಾಣ ಪ್ರತಿಷ್ಠಾಣ।

ಭರತ ಭೂಮಿಯೇ ಶ್ರೀ ರಾಮ
ಪೂರ್ವದ ಸಪ್ತ ಸಹೋದರಿಯೇ
ಹೂಡಿದ ರಾಮನ ಬಿಲ್ಲು ಬಾಣ ।
ಕಚ್ಚ್ ಕಾರಿಯೇ ವೈರಿಗೆ ಅಗ್ನಿ ಬಾಣ॥

ತೆಂಕಣದೆದೆಯ ಬಿಂಕದ ಶರಧಿ 
ಲಂಕೆಯ ರಾವಣನ ಗರ್ವದ ಉರಿ।  
ಚುಂಬಿಸಿತು ರಾಮನ ಪಾದದ ಧನ
ನಂಬಿದ ಜನರಿಗದು ದಸರೆಯ ದಿನ ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...