Sunday, January 14, 2024

* ಸಂಕ್ರಾಂತಿ *


ಭೂತಾಯಿ ಮನೆ ಮುಂದೆ
ನೇಗಿಲನ ರಂಗೋಲಿ 
ಬಾಗಿದರೆ ಹೆತ್ತಮ್ಮ, ಭತ್ತದ ಚಿತ್ತಾರ 
ಮಡಿಲೊಳಗ।

ಹುತ್ತರಿ ಹಬ್ಬಕ್ಕೆ ಉತ್ತರಕೆ ಪಯಣ
ನೆತ್ತರ ಬಸಿಯುವನು ಬಸವಣ್ಣ।
ಎತ್ತ ನೋಡಿದರು ಹಸಿರನ ತೋರಣ 
ಎತ್ತಿನ ಕಷ್ಟ ನೆನೆಯೋಣ॥

ಮಕರನ ಮನೆ ಮುಂದೆ 
ಬಾಳಿನ ಬಾಸ್ಕರ ಬಂದಾನ  
ಬದಲಾವಣೆಯ ಸಂಕ್ರಾಂತಿ ತಂದಾನ.
ಜಗಕೆಲ್ಲ ಎಳ್ಳು ಬೆಲ್ಲದ ಸ್ನಾನ
 
ಸುಗ್ಗಿಯ ಬೆಳೆ ತಂದು ಎಗ್ಗಿಲ್ಲದೆ 
ಹಂಚಿದರ ಬದುಕೆಲ್ಲ ಸಗ್ಗದ ಸಿರಿ ಕಾಣೋ
ರೈತನ ಬೆವರಿಗೆ ನಾಡೆಲ್ಲ ಸಿಂಗಾರ। 
ಭತ್ತದ ರಾಶಿ ಬಂಗಾರ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...