Saturday, January 13, 2024

* ಇರಬೇಕು ನಿರಾಳ *

* ಇರಬೇಕು ನಿರಾಳ *

ಮಾಡದ ತಪ್ಪಿಗೆ ಮೂಡಿದರೆ 
ಆರೋಪ, ಅದು ನೀ ಬೆಳೆದ ತಪ್ಪಿಗೆ
ಆಗದಿರು ಸಪ್ಪಗೆ ಅವರು ಬೀಳುವರು ತಿಪ್ಪಿಗೆ
ನಕ್ಕು ಬಿಡೋಣ ಒಮ್ಮೆ 
ಅತ್ತು ಬಿಡೋಣ ಒಮ್ಮೆ ॥

ಕಲ್ಲು ಮುಳ್ಳುಗಳ ಈ ದಾರಿ 
ಯಾರಿಲ್ಲ ಈ ಬಾರಿ,ನಾವು ನಡೆದರೆ ಹೆದ್ದಾರಿ
ತಿಳಿಯದ ಕೋಡಿ, ಹಾಕುತಾರ ಚಿಮಾರಿ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

ಮಾಡಿಸಿದವರು ನಗತಾರ, ಕಾಡಿಸಿದವರ
ಕರಗತಾರ, ನಡೆದವರು ತಲಪುತಾರ.
ನಕ್ಕವರ ಪಾಪದ ಕೊಡ ಬಾರ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

ಕಾಗಕ್ಕ ಕರಿತಾಳ ಗುಬ್ಬಕ್ಕಮರಿತಾಳ
ಓತಿಕ್ಯಾತ ಲೆಕ್ಕ ಬರೆಯತಾಳ
ಕೋತಿಯ ಮೋತಿ ಮುಸರಿನೇ ಎಲ್ಲಾ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

ಯುದ್ಧ ಅಂದ ಮೇಲ ಗೆದ್ದರೂ ಸೋಲು
ಬಿದ್ದರೂ ಇರಬೇಕು ನಿರಾಳ
ಒದ್ದವನ ಸೊಂಟಕ್ಕೂ ಬಿತ್ತು ಬಾರ
ನಕ್ಕು ಬಿಡೋಣ ಒಮ್ಮೆ
ಅತ್ತು ಬಿಡೋಣ ಒಮ್ಮೆ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...