Friday, April 5, 2024

* ಉಗಾದಿ (ಯುಗಾದಿ)ಉರಿಬಿಸಿಲು. *



* ಉಗಾದಿ (ಯುಗಾದಿ)ಉರಿಬಿಸಿಲು. *

ಬಿಸಿಲಿಗೂ ಬೇಡಿಕೆಯ ಮುಖವುಂಟು
ಬೇಸರಿಸದಿರು ಕಾಲನುಸಿರಿದು ಸೊಸೆಯೆ ।
ಹಸಿರು ಹಾಸಿಗೆಯ ಪಲ್ಲಂಗ 
ಮೇಲೆ ಮಲ್ಲಿ
ಗೆ ಪರಿಮಳ, ಮುಂದೆ
ವರುಣನ ಕೃಪೆಗೆ ಪಾತ್ರಳಾಗುವಳೆ
ಈ ಉರಿಬೀಸಿಲು ॥

ಬೀಸಣಿಕೆಗೂ ಬೇಡಿಕೆಯುಂಟು
ವಾಸನೆಗೆ ಮಾಮರ ಚಿಗುರೀತು ಸೊಸೆಯೆ।
ಕೋಗಿಲೆಗೆ ಮಧುರಕಂಠದ ದೇಣಿಗೆ
ನೇಗಿಲ ಯೋಗಿಗೆ ಸುಗ್ಗಿಯು ಮುಂದೆ
ಬ್ಯಾಸರಾದರೆ ರಜೆ ನೀಡುವವಳೆ 
ಈ ಉರಿಬಿಸಿಲು॥

ದೂರದ ಪತಿರಾಯ ದುಡಿದು ದನಿದರೂ ದೂರವಾಣಿಯೆ ಸಂಗಾತಿ ಸೊಸೆಯೆ।
ಬರವು, ಬಳಿ ಬಂದು ಸೇರಲು.
ಭವಸೇರಲಭಯ ನೀಡುವವಳೆ
ಈ ಉರಿ ಬಿಸಿಲು॥

ಬೇವುಗಳ ಹೂವುಗಳನರಳಿಸುವ 
ಜೀವನದ ಮೊದಲ ಮಾಸವಿದು ಸೊಸೆಯೆ। 
ಕಹಿಯೂಳಗೂ ಸಿಹಿ ಜೇಣಿನ ಸುವಾಸನೆ 
ಭ್ರಮರಗಳಿಗೂ ಚಾಮರ ನೀಡುವವಳೆ
ಈ ಉರಿಬಿಸಿಲು ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...