ನುಡಿ ನಮನ,
ಅಪರ್ಣಾ.....
ತಾವು ಅಪ್ಪಟ ಕನ್ನಡದ ಸುವರ್ಣ
ಕಾಲನ ಕರೆಗೆ ಬೆಲೆ ನೀಡಿದ ಬಾಲೆ,
ವಯಸ್ಸು ಐವತ್ತೆಂಟು
ಅದು ನಂಬರಿಗೆ ಮಾತ್ರ ನಂಟು।
ಬದುಕಿರುವವರೆಗೆ ಬದುಕಿಸಿದಳು
ಕನ್ನಡದ ಕಂಪು ।
ಅದು ನಮಗಾಗಿತ್ತು ತಂಪು
ನಟನೆ, ನೀರೂಪಣೆ, ಹಾಸ್ಯ
ನೀವು ನೀಡಿದ ಕನ್ನಡದ ಕೊಡುಗೆ
ಇನ್ನಾರು ಮಾಡಲು ಸಾಧ್ಯ ?...
ಮಾತು ಅರಳು ಹುರಿದಂತೆ,
ಹಗ್ಗ ಹೊಸೆದಂತೆ
ಮಗ್ಗಿನಲ್ಲಿ ಹಾಲು ಕಾಯ್ದುಕ್ಕಿದಂತೆ
ಸುಗ್ಗಿಯಾ ಸೃಷ್ಟಿಸಿದಾ ಕನ್ನಡದ ಕುವರಿ
ಹಿಡಿದೆ ಜವರಾಯನ ಸವಾರಿ
ದುಃಖ ನಿಮಗಲ್ಲ ಅದು ದಕ್ಕಿದ್ದು
ಆರುವರೆ ಕೊಟಿ ಕನ್ನಡಿಗರಿಗೆ .
ನೀವು ನಗುತ್ತಾ ಹಾಡುತ್ತ
ಏರಿದಿರಿ ಜವರಾಯನ ಕುದುರೆ.
ಉಳಿದಿರಿ ನಮ್ಮೆಲ್ಲರ ಹೃದಯದಲ್ಲಿ॥
ಕನ್ನಡದ ಕಂಪು ಸೊಂಪಾಗಿ ,
ಪಸರಿಸಲು ಇನ್ನೊಮ್ಮೆ
ಹುಟ್ಟಿ ಬಾ ಅಪರ್ಣಾ ......
No comments:
Post a Comment