Sunday, July 21, 2024

* ಗುರುವೇ ನಿನಗೆ ನಮನ *


ಹರನಂತೆ ವರಕ್ಕಾಗಿ ಗುರುವಿಗೆ ಪೂಜೆ
ಗುರು ಪೂರ್ಣೀಮೆ ಬಂತಿಂದು ಧರೆಗೆ।
ವ್ಯಾಸರು ದಾಸರು ನುಡಿದುದೆಲ್ಲವು 
ಹೊಸ ಬಾಳಿನ ದಿವ್ಯೌಷಧವು ನಮಗೆ॥

ಗುರು ನೀಡಿದ ,ಹಿತವಾಗಿ ನಮಗೆ ಮತಿ
ಅರಿತರೆ, ಗತವೂಂದು ದಾರಿ ಬಾಳಿಗೆ।
ಆಷಾಡ ಶುದ್ಧ ಪೂರ್ಣೀಮೆಯ ದಿನ
ವ್ಯಾಸ ಜನನವು ವೇದದರಿವು ನರನಿಗೆ॥

ಕತ್ತಲೆಯು ಕಳೆದು, ಬೆಳಕಿನಲ್ಲಿ ಸುತ್ತಲು
ಸತ್ಯದ ದರ್ಶನ ಬೇಕು ಗುರು ನಮಗೆ
ಮತ್ತೆ ಬಂದಿದೆ ಆಷಾಡ ಪೂರ್ಣೀಮೆ
ಸಾಕ್ಷಾತ್ಕಾರ ಮಾಡು ಗುರುವೆ ನಮಗೆ॥

ವೇದದ ಸಾರ ಅರುಹಿದ ವ್ಯಾಸರು 
ಬದುಕಿನ ಸಾರ ತಿಳಿಸಿದ ಬುದ್ಧನು |
ಬಿದ್ದಿರುವ ಜನರಿಗಿವರು ದಾರಿದೀಪ 
ಎದ್ದು ನಮಿಸುವೆವು ಗುರುವೆ ನಿಮಗೆ

ಗುರುವೆ ತೋರು, ಇರಲಿ ಕರುಣೆ 
ಹರ ಮುನಿದರೆ ನಮಗಿಲ್ಲ ಮರಣ।
ಬರವೆ, ಬೆಲ್ಲ ದಂತ ಬದುಕಿನರಮನೆಗೆ
ಎಲ್ಲವನು ತಿಳಿದವ, ಗುರುವೇ ನಿನಗೆ ನಮನ॥



 





No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...