Saturday, October 12, 2024

ಕನ್ನಡದ ಕಂದ

ಕನ್ನಡದ ಮಾಧುರ್ಯ ಕಂದನ 
ಬಾಯಲ್ಲಿ, ಕದಳಿಯ ಎಲೆ 
ಗಾಳಿಗೆ ಸುಳಿದಾಂಗ ।।

ಕನ್ನಡದ ವಾಣಿ, ಕಟ್ಟಿದರೆ 
ಕರಿಮಣಿ, ಇಟ್ಟರೆ ಚೂಡಾಮಣಿ
ಬೆಟ್ಟಕ್ಕೆ ಬೆಳಕಿನ ಕಿರಣದಾಂಗ।।

ಪದಗಳ ಜೊತೆಗೆ ಹದವಾಗಿ
ಓಡುವಳು, ವಾದಗಳಲ್ಲಿಯೂ  
ವೇದನಾದ, ವೇದಾಂತಿಯಾಂಗ॥

ಪರಭಾಷೆಗೆ ನೀಡವ ಗೌರವ
ಅರಿವಿಗೆ, ಕನ್ನಡ ಭಾಷೆಯ ಪರ
ಹೊರೆಯಾಗದ ಹಿರಿತನದಾಂಗ॥

ಮಾಗಿದ ಮಾತುಗಳು,ತೂಗುವಳು
ತತ್ವಜ್ಞಾನ, ನುಡಿ ಉಡಿತುಂಬ 
ಮುತೈದಿಯ ಎಲೆಯಡಕಿಯಾಂಗ॥

ಭಾಷೆಯಲ್ಲಿ ಬೀಸುವಳು ಸಂಸ್ಕಾರದ
ಬೀಜ,ಸಂಸ್ಕೃತಿ ವಾರಸದಾರಳಿವಳು
ಹೊಸತನಕ್ಕೂ ಬೇಕಿವಳು ಕಳಸದಂಗ॥






No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...