Monday, January 13, 2025

ಕಲಿಗಾಲವರಳಿದರೆ

ಮೂಢನಂಬಿಕೆಗಳು ಮೌಡ್ಯದ ಅಡ್ಯೆಯಾಗಿ
ಆಡಂಬರಗಳೆ ಸಂಸ್ಕೃತಿಯ ಸೋಗುಗಳಾದರೆ
ಶೋಷಣೆಯು ಸಂತೋಷದ ಮೂಲವಾಗುವುದು
ಶಂಡನು ರಾಜನಾಗಿ ರಾಜ್ಯ ವಾಳುವುನಯ್ಯ

ಗರ್ವವು ಸ್ವಾಭಿಮಾನದ ಪ್ರತೀಕವಾಗಿ
ಗುರುತನ ಉದರ ಉದ್ಯೋಗವಾದರೆ
ಹಿರಿತನ ಕಮಿಷನ ದಂದೆಯಾಗುವುದು
ದೊರೆತನದ ಅಮಲು ಮಹಲಾಗುವುದಯ್ಯ

ಆರೈಕೆಯು ಪೂರೈಕೆಯ ಅರ್ಥಶಾಸ್ತ್ರವಾಗಿ
ವಿಕಸನದ ಮಾನಗಳು ಮಹಡಿಗಳಾದರೆ
ಹುಸಿಗನಸುಗಳೆ ನಿಜ ಸಾಮ್ರಾಜ್ಯಳಾಗುವವು
ದಾಸಿ ಮಗನ ದರ್ಬಾರಗಸಿಗ ಸಾಗುವುದಯ್ಯ

ಪ್ರೀತಿಯ ನಾಟಕಗಳು ಪವಿತ್ರ ಮಂದಿರಗಳಾಗಿ
ಖ್ಯಾತಿ ಕುಖ್ಯಾತಿಯ ಅಂತರವರಿಯದಿದ್ದರೆ
ಜೋತಿಷಿಗಳೇ ನಿಜ ದೇವರುಗಳಾಗುವರು
ವಂಚಕನಿಗೆ ಜಾಣನ ಪಟ್ಟಗಟ್ಟುವರಯ್ಯ


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...