Thursday, March 27, 2025

ನನ್ನ ನೆಲದಲ್ಲಿ ನಾ ನೆಟ್ಟ ಮಾವು

ನನ್ನ ಮಗ ಹೊಲಕ್ಕೆ ಹೋಗಿ ನೀರು ಹಾಕಿ ಪೊಟೋ ತೆಗೆದು ಕಳಿಸಿದ ಚಿತ್ರ 

ನನ್ನ ನೆಲದಲ್ಲಿ 
ನಾ ನೆಟ್ಟ ಮಾವು
ನಗು ಮುಖದ ಸಿಂಗಾರಿ
ಏನಿವಳ ವೈಯಾರ
ಕಾಗೆ ಗುಬ್ಬಚ್ಚಿಗೂ ಕಚಗುಳಿ 
ಇಟ್ಟವಳಿವಳು 
ಕೋಗಿಲೆಗೆ ದ್ವನಿ ನೀಡಿದವಳು
ನವಿಲಿಗೆ ನರ್ತನ ಕಲಿಸಿದವಳಿವಳು
ಪ್ರೀತಿಯಿಂದ ಬೆಳಸಿ ಸೋತು ತಿರುಗುವೆ 
ಹಗಲಿರುಳು
ಹಸಿವು ಹಿಂಗಲಲ್ಲ 
ಹೊಸ ಹುರುಪು 
ಹುರಿಗೊಂಡು ಹೊಸ ಚೈತನ್ಯ ತರಲು
ಏನಿವಳ ಅಂದ ಕಣ್ಮನಕೆ ಚಂದ
ಉರಿವ ಸೂರ್ಯನೂ ಸೋತು 
ಸ್ನೇಹಕ್ಕೆ ಹಾತೊರೆದ.
ನಾನೆ ಬೆಳೆಸಿದ ಬೆಡಗಿ 
ನನಗಿರಲಿ ಎಂದರೇನು ಚಂದ 
ನಗು ನಗುತ ರವಿಯ 
ಗೆಳೆತನ ಮಾಡಿದವಳು !
ನಿನ್ನ ರಕ್ಷಣೆಗೆ 
ನನ್ನ ಜಾಲಿ ಇಪ್ಪಡಿಯ ಕೋಟೆ 
ಭೇಧಿಸ ಬಯಸಿದರೆ ಬಾಣ. 
ಮುಂದೆ ಹೋಗಿ ಹಿಂದೆ ಸರಿದರೆ 
ರಕ್ತದ ತರ್ಪಣ 
ಸ್ನಿಗ್ದ ಸೌಂದರ್ಯದ ಕಣಿ
ನಗನಾಣ್ಯ ಗಳು ಸಾಟಿ ಏನು ನಿನಗೆ
ಕುರಿಗಾಯಿ ಕರಿಯ, ದನಗಾಯಿ ಭೀಮ
ದುರುಗುಟ್ಟಿ ನೋಡುವರು ನಿನ್ನ
ಮರವಾಗುವ ಮುನ್ನ 
ಕುರಿಗಾರ ಹಾಕಿದರ ಕಣ್ಣು 
ನನ್ನ ಬಾಯಿಗೆ ಬೀಳುವುದೇನೋ ಮಣ್ಣು !!!!

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...