Monday, July 7, 2025

ಮೊಹರಂ

      ಹಬ್ಬಗಳ ಉದ್ದೇಶವೆ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು, ಬಂದು ಬಾಂಧವರು ಹತ್ತಿರ ಸೇರುವುದು, ಹಳಸಲು ಕಶ್ಮಲಗಳು ಹರಿದ ಹೋಗಿ ಹೊಸ ಉತ್ಸಾಹ ತುಂಬಿ ಬರುವುದಾಗಿದೆ. ಇಲ್ಲದಿದ್ದರೆ ಅದು ಹಬ್ಬ ಅಂತ ಅನ್ನಿಸಲಾರದು ಅದೂ ಜಾತಿ, ಧರ್ಮ ವನ್ನು ಮೀರಿದ ಮನಸ್ಸನ್ನು ಪುನಶ್ಚೇತನಗೊಳಿಸುವ ಸಂಜೀವಿನಿ.ಅದಕ್ಕಾಗಿ ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಸಾಮಾಜಿಕ ಬಳುವಳಿ ಇದನ್ನು ಬಳಸಿಕೊಂಡ ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.ನಾಗರಿಕತೆ ಬೆಳೆದಂತೆ ಮನುಷ್ಯ ನ ನೆಮ್ಮದಿಯನ್ನು ಇಮ್ಮಡಿಗೊಳಿಸುವ ಭೌತಿಕ ಸಾಧನಗಳು ಸಾಕಷ್ಟು ಇವೆ.ಅವು ಏನೆ ಇರಲಿ ಅವು ವ್ಯವಹಾರಿಕ ಹಾದಿಯನ್ನು ಹಿಡಿದಿರುವುದನ್ನು ನಾವೆಲ್ಲ ಕಾಣುತ್ತೇವೆ ಅದರಾಚೆಯೂ ಕೂಡಾ ಹಳ್ಳಿಗಳಲ್ಲಿ ಧರ್ಮದ, ಜಾತಿಯ ಚೌಕಟ್ಟಿನ ಮೀರಿದ ಹಬ್ಬದ ಆಚರಣೆಯು ನನ್ನ ನ್ನು ಈ ನಾಲ್ಕು ಸಾಲುಗಳನ್ನು ಬರೆಯುವಂತೆ ಮಾಡಿದ್ದು ಸತ್ಯ. ನಾನು ಹುಟ್ಟಿದ ಊರು ಹಾನಾಪೂರ ಎಸ್ ಪಿ. ನನ್ನೂರಿನಲ್ಲಿ ಒಂದೆ ಒಂದು ಮುಸ್ಲಿಮ ಕುಟುಂಬವೂ ಇಲ್ಲ ಆದರೂ ಮುಸ್ಲಿಮರ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮೊಹರಂ ಹಬ್ಬವನ್ನು ಊರಿನವರೆಲ್ಲ ಸೇರಿ ಆಚರಿಸುವ ರೀತಿಯು ಭಾವೈಕ್ಯಕ್ಕೆ ಹಿಡಿದ ಕನ್ನಡಿ ವಿವಿಧ ಜಾತಿಯ ಜನರು ವಾಸಿಸುವ ಈ ಊರಿನಲ್ಲಿರುವ ಹಬ್ಬ ಜ್ಯಾತಾತೀತ ಪದಕ್ಕೆ ಶೃಂಗಾರ. ಹಬ್ಬದ ಆಚರಣೆಯ ವಿಧಗಳು ಅವು ಏನೆ ಇರಲಿ ಬದುಕನ್ನು ಆಸ್ವಾದಿಸುವ ಅವರ ಪದ್ದತಿಯು ನಿಜಕ್ಕೂ ಅನುಕರಣೀಯ. ಹೆಜ್ಜೆಯ ಕುಣಿತಕ್ಕೆ ಅವರು ನೀಡಿದ ಆಧುನಿಕ ಸ್ಪರ್ಶ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿತು ಟ್ರ್ಯಾಕ್ಟರ್ ಗೆ  ಅಳವಡಿಸಿದ ಸ್ಪೀಕರ್ ಕೋಲಾಟದ ಕುಣಿತಕ್ಕೆ ತಾಳಹಾಕಿತು ಯುವಕರ ಸಿಳ್ಳೆಕೆಕೆಗಳು ಲೌಕಿಕ ಚಿಂತಕರ ಮೌನವನ್ನು ಮುರಿದು ಗಾನದಲ್ಲಿ ತೇಲಿಸಿದವು, ದುಡಿದು ಬಸವಳಿದವನಿಗೆ ಇದಕ್ಕಿಂತ ಟಾನಿಕ್ ಇನ್ನೂಂದು ಸಿಗಬಹುದೆ ?ಮೊಹರಂ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತಿದ್ದು, ಕ್ರಿ. ಶ 680ರಲ್ಲಿ ನಡೆದ ಕರ್ಬಲಾ ಕದನದಲ್ಲಿ ಮರಣ ಹೊಂದಿದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ರ ಸವಿನೆನಪಿಗಾಗಿ ಶೋಕದೊಂದಿಗೆ ಈ ದಿನವನ್ನು ಆಚರಿಸಲಾಗುವುದು. ಇದು ಇಸ್ಲಾಮಿಕ್‌ ಕ್ಯಾಲೆಂಡರ್‌ನಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದ ಹಬ್ಬವಾದರೂ ಆ ಯಾವ ಐತಿಹಾಸಿಕ ಮಾಹಿತಿ ಅರಿವು ಸಂಪೂರ್ಣ ಅವರಿಗೆ 
ಇಲ್ಲದಿದ್ದರೂ ನಂಬುಗೆ ಹಾಗೂ ಸಂಪ್ರದಾಯದ ಬೆಳಕಿನಲ್ಲಿ ಅವರು ಕಾಣುವ ಸಂತೋಷ ನಿಜವಾಗಿಯೂ ಮೆಚ್ಚಬೇಕಾದದ್ದೆ 

Thursday, July 3, 2025

ನೋಟ ಬುಕ್ ವಿತರಣೆ




ಹಣ ಬಂದಾಗ ಗುಣ ಕಳದುಕೊಂಡು 
ಹಾದಿ ತಪ್ಪಿದವರು ಬಾಳ ಜನ
ಗಳಿಸಿದಾಗ ಬಳಸಲು ಶಾಲೆಗೆ 
ಬಂದವರು ಬಹಳ ಕಡಿಮೆ ಜನ

ಬಡವರ ಮಕ್ಕಳಿಗೆ ಬಾಗ್ಯ ನೀಡಲು
ಗುಳೇಗುಡ್ಡದಾಗ ಏನು ಕಡಿಮೆ ಜನ
ಕಳಸಾ ಹಿಡಕೊಂಡು ಕರಕೊಂಡ 
ಬಂದಾರ ಪುರಂದರ ವಿಠ್ಠಲ, ಈ ದಿನ 

ಓದುವ ಮಕ್ಕಳಿಗೆ ಪುಸ್ತಕ ತಂದಾರ
ಸವದತ್ತಿ ಯಲ್ಲಮ್ಮನ ಮಗ ಪರಸುರಾಮಣ್ಣ
ಓದುವುದೊಂದೆ ಬಾಕಿ ಐತಿ ಮಕ್ಕಳ, 
ಜಾದೂ ಮಾಡಿದಂತಲ್ಲ ಸಾಧನ 

ನಾವೆಲ್ಲ ತೆಗೆದುಕೊಳ್ಳೋಣ ಪ್ರತಿಜ್ಞೆ  
ಮೊಬೈಲ್ ರೀಲ್ಸ್ ನೋಡೋದು ಬಿಡೋಣ
ಅದೆ ದಾನಿಗಳಗೆ ತುಂಬು ಹೃದಯದ ನಮನ 
ತುಂಬು ಹೃದಯದ ನಮನ 




  

ಮೊಹರಂ

      ಹಬ್ಬಗಳ ಉದ್ದೇಶವೆ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು, ಬಂದು ಬಾಂಧವರು ಹತ್ತಿರ ಸೇರುವುದು, ಹಳಸಲು ಕಶ್ಮಲಗಳು ಹರಿದ ಹೋಗಿ ಹೊಸ ಉತ್ಸಾಹ ತುಂಬಿ ಬರುವುದಾಗಿದೆ. ಇ...