Sunday, December 16, 2018

ಕಾರ್ಗಿಲ್ ಕದನ

ಕಾರ್ಗಿಲ್ನಾ ಕ್ರಮಣದ  ಕುನ್ನಿಗಳೇ
ಕತ್ತಲೆ ಕವಿದಿದೆ ನಿಮಗೆ
ದಾಯಾದಿಗಳ ಮನೆಗೆ ದಾರಿ ಮಾಡಿ
ಧರ್ಮವ ಮೆರೆದೆವು ನಿಮಗೆ

ದ್ರಾಸ್ ಬಟಾಲಿಕ್ ಗಡಿ ನಾಡಿಗೆ
ಗುಂಡಿನ ಮಳೆಗರೆದಿರಿ ನಮಗೆ
ಸಪ್ತ  ಖಂಡಕೆ ಶಾಂತಿ ಹೇಳಿದ ನಾಡಿಗೆ
ಸವಾಲು ಬೇರೆ ಅಡಿಗಡಿಗೆ
         ಸಾಕಿಲ್ಲವೇನೋ ಆ ಸೋಲುಂಡ ದಿನ
         ಮರೆತಿರಾ  ಇತಿಹಾಸದ ಮಣ್ಣು ಮುಕ್ಕಿದಾ ದಿನಾ
 ಶಾಂತಿಪ್ರಿಯರು ಕ್ರಾಂತಿ ಬಯಸೆವು
ಅಶಾಂತಿ ಬಯಸಿದರೆ ಬಿಡೆವು
        ದ್ವೇಷದ ಜ್ವಾಲೆ ಹೊತ್ತಿಸುವರು ನಿಮಗೆ
         ದ್ವಾಸಿ ಬೇಯಿಸುವರು  ತಮಗೆ
ದಾಸರಾಗುವ ಮುನ್ನ ಇತಿಹಾಸ ಬರೆಯಿರಿ
ಬ್ರಿಟಿಷರು ಬಿತ್ತಿದ ಧರ್ಮ ಜಾತಿ ಜ್ವರ
ತಂದಿತು ಗಡಿನಾಡಿಗೆ ಗುಂಡಿನ ಫಲ
ಕಡಿಯಿರಿ ಆ ಘೋರ ಮರ
ಪಡೆಯಿರಿ ಶಾಂತಿಯ ವರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...