Tuesday, December 11, 2018

ಅಂಕುಡೊಂಕಿನ ದಾರಿಗಳೇ

ಅಂಕುಡೊಂಕಿನ
 ದಾರಿಗಳೇ
ಬಿಂಕ ನಿಮಗಿಲ್ಲ
ಸುಂಕ  ಕೀಳುವ
ದೊರೆಗಳಿಗೆ ಅಂಕುಶ
ಯಾಕಿಲ್ಲ
ಆಚೆ ಈಚೆ ಮರಳು
ಚೆಲ್ಲಿ ದೋಚುವರು ಇವರೆಲ್ಲ
ಆಚಾರ ಹೇಳುವ
ಸ್ಥಳದಲ್ಲಿ ಮೊದಲೆ
ಬರುವರು ಇವರೆಲ್ಲ

ಅಂಕುಡೊಂಕಿನ ದಾರಿಗಳೇ
ಬಿಂಕ ನಿಮಗಿಲ್ಲ
ಕಳ್ಳರೆ ಇರಲಿ ಸುಳ್ಳರೆ ಇರಲಿ
ನೀವೆ ಎಲ್ಲರಿಗೂ ಆಧಾರ,
ಸತ್ಯಸಂದರಿಗೆ ಸನ್ಮಾರ್ಗ
ತೊರುವ ನಿತ್ಯ ಕಾಯಕ,
ಸಜ್ಜನ ನಾಯಕರಿಗೆ
ಮಜ್ಜನದ ಅಷ್ಟಕ.
ಸರಾಯಿ ಕುಡಿದು ಸವಾರಿ
ಮಾಡುವ ಬಿಡಾಡಿ ಚಾಲಕರಿಗೆ
ನೀವೆ ಕಳನಾಯಕ !


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...