Tuesday, December 11, 2018

ಬಾಡಿದ ಭೂರಮೆ

ಬಾಡಿದ ಭೂರಮೆ


ಬಾಡಿದ ಭೂರಮೆಯ ವದನ
ನೋಡಬಾರದೆ ಒಮ್ಮೆ

ಇರಳು ಕತ್ತರಿಸುವ ಸೂರ್ಯನ ಸೃಷ್ಟಿಸಿ
ಬೆಳಗು ಕಾಣಲು ಬಯಸಿದವರು ನಾವು

ಮಂಗಳನಂಗಳಕ್ಕೆ ಕಾಲು ಚಾಚಿ
ಕೆಕೆ ಹಾಕಲು ಬಯಸಿದವರು ನಾವು

ಹರಿಯುವ ನದಿ ಕಟ್ಟಿ
ಬಡವರ ಬದುಕು ಮೆಟ್ಟಿ
ಮ್ಯುಸಿಯಂನಲ್ಲಿಟ್ಟು ಹಣ
ಕೊಟ್ಟು ನೋಡಿದವರು ನಾವು

ಹಸಿರು ಶಾಲು ಸರಿಸಿ
ಎಲ್ಲೆಲ್ಲೊ ತಾರಸಿ ಪಸರಿಸಿ
ಉಸಿರನ್ನೆ ಕತ್ತರಿಸಿ
ಎಸಿ ಬಯಸಿದವರು ನಾವು

ಬಾಗಿ ಬೆಂಡಾದರು
ಬಿಡಲೊಲ್ಲೆವು ನಾವು
ಬಾಂಬುಗಳನ್ನು ಬಿತ್ತಿ
ಭತ್ತದ ಬೆಳೆ ಬಯಸಿದವರು ನಾವು

ಇಳೆಯನ್ನು ಕೊಳೆ ಮಾಡಿ
ಕೊಳೆ ತೆಗೆಯುವ ಯಂತ್ರವ ಮಾಡಿ
ತಂತ್ರಜ್ಞಾನ ಪ್ರಗತಿ ಎಂದು ಬೀಗಿದವರು ನಾವು

ಸತ್ತ ಹೆಣಕೆ ಸೃಂಗಾರಕ್ಕೆ
ಸಾವಿರ ಸಾವಿರ ಕೋಟಿ
ಹೆತ್ತವರನ್ನು ನೋಡದವರು ನಾವು

ಭೂತಾಯಿ ಮೈ ಕೊಡವಿದಾಗ
ಒದ್ದಾಡುವವರು ನಾವು

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...