Friday, December 14, 2018

ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವನ್ನು ಚರ್ಚಿಸಿರಿ.


           ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವನ್ನು ಚರ್ಚಿಸಿರಿ.

ಉತ್ತರ;    ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯನ್ನು ಜನಸಾಮಾನ್ಯರ ಚಳುವಳಿಯನ್ನಾಗಿ ಮಾಡಿದರು ಮತ್ತು ಭಾರತದ ಜನತೆಗೆ ಸತ್ಯಾಗ್ರಹ ಎಂಬ  ಅಸ್ತ್ರ ನೀಡಿ ಯಶಸ್ವಿಯಾಗಿ ಮುನ್ನೆಡಿಸಿದರು.

 ಮೊಹನದಾಸ ಕರಮಚಂದ ಗಾಂಧಿ 1893 ರಿಂದ 1914 ರವರೆಗೆ ದಕ್ಷಿಣ ಆಪ್ರಿಕಾ ಸರ್ಕಾರದ ವಿರುದ್ಧ ಹೊರಾಡಲು ಸತ್ಯಾಗ್ರಹ ತಂತ್ರ ಕಂಡು ಕೊಂಡು 1915 ಕ್ಕೆ ಭಾರತಕ್ಕೆ ಮರಳಿ  ಸಬರಮತಿ ಆಶ್ರಮದಲ್ಲಿ ಸತ್ಯ, ಅಹಿಂಸೆ ಆದರ್ಶಗಳನ್ನು ಅನುಸರಿಸಿ ಬಹುಬೇಗ ಮೂರು ಹೊರಾಟಗಳಲ್ಲಿ ತೊಡಗಿದರು

  ಅವುಗಳೆಂದರೆ ಚಂಪಾರನ್ ಸತ್ಯಾಗ್ರಹ ತೀನಕಾತೀಯಾ ವಿರುದ್ಧ ಮೊದಲ ಕಾಯಿದೆ ಭಂಗ ಚಳುವಳಿ ಸಂಘಟಿಸಿ ತೀನ ಕಾತಿಯಾ ರದ್ದುಗೊಳಿಸಿದರು. ಅಹಮದಾಬಾದ ಗಿರಣಿ ಮುಷ್ಕರದಲ್ಲಿ ಮೊದಲ ಉಪವಾಸ ಸತ್ಯಾಗ್ರಹ ಕೈಕೊಂಡು ಕಾರ್ಮಿಕರಿಗೆ ಸಂಬಳ ಹೆಚ್ಚಿಸುವಂತೆ ಮಾಡಿದರು. ಗುಜರಾತಿನ ಖೇಡ ಸತ್ಯಾಗ್ರಹದಲ್ಲಿ ಮೊದಲ ಅಸಹಕಾರ ಚಳುವಳಿ ಮಾಡಿ ಶಕ್ಯರಿದ್ದವರು ತೆರಿಗೆ ಕೊಡುವಂತೆ ಮಾಡಿದರು.

 1919 ರ ಜಲಿಯನ್ ವಾಲಾಭಾಗ ಹತ್ಯಾಕಾಂಡಕ್ಕೆ ನೊಂದು ತಮ್ಮ ಬಿರುದನ್ನು ಮರಳಿಸಿದರು.ಖಿಲಾಪತ್ ಚಳುವಳಿಗೆ ಕಾಂಗ್ರೆಸ್ ಬೆಂಬಲ ನೀಡುವ ಮೂಲಕ ಗಾಂಧೀಜಿ ಹಿಂದೂ ಮುಸ್ಲಂ ಸ್ನೇಹ  ಗಾಢ ಗೊಳಿಸಲು ಕಾರಣೀಭೂತರಾದರು. 1919 ಆಗಷ್ಟ 1 ರಂದು ತಿಲಕರು ತೀರಿಕೊಂಡಾಗ ಗಾಂಧೀಜಿಯವರು ಕಾಂಗ್ರೆಸ್ ಮುನ್ನೆಡೆಸುವ ಜವಾಬ್ದಾರಿ ಪಡೆದು ಅಸಹಕಾರ ಚಳುವಳಿ ಪ್ರಾರಂಭಿಸಿದರು.ವಿದೇಶಿ ವಸ್ತು ಬಹಿಷ್ಕರಿಸಿ ಜಾಗೃತಿ ಮೂಡಿಸಿದರು ಮತ್ತು ಖಾದಿ ವಸ್ತ್ರ ಹೆಮ್ಮೆಯ ವಿಷಯವಾಯಿತು.ಆದರೆ 1922 ರ ಚೌರಿ ಚೌರಾ ಘಟನೆಯಿಂದಾಗಿ ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.ಅಸಂತೃಪ್ತರಾದ ಮೊತಿಲಾಲ ನೆಹರು  ಸಿ ಆರ್ ದಾಸ ಸ್ವರಾಜ್ಯ ಪಕ್ಷ ಕಟ್ಟಿದರು.

  1929 ರಲ್ಲಿ ಲಾಹೋರ ಕಾಂಗ್ರೆಸ್ ಅಧಿವೇóಶನದಲ್ಲಿ “ಪೂರ್ಣ ಸ್ವರಾಜ್ಯ” ಕಾಂಗ್ರೆಸ್ ಗುರಿ ಎಂದು ನೆಹರು ಘೋಷಿಸಿದರು ಮತ್ತು ಕಾಯ್ದೆ ಭಂಗ ಚಳುವಳಿ ಯನ್ನು  ಆರಂಭಿಸಲು ಗಾಂಧೀಜಿಯವರಿಗೆ ಅಧಿಕಾರ ನೀಡಿದರು.

  1930 ಮಾರ್ಚ 12 ರಂದು ಸಬರಮತಿ ಆಶ್ರಮದಿಂದ ದಂಡಿಯವರೆಗೆ ಕ್ರಮಿಸಿ ಹಿಡಿ ಉಪ್ಪು ತಯಾರಿಸಿ ಉಪ್ಪನ ಕಾನೂನನ್ನು ಮುರಿದರು.ಬ್ರಹತ್ ಪ್ರಮಾಣದಲ್ಲಿ ಜನರು ಚಳುವಳಿಯಲ್ಲಿ ಭಾಗವಹಿಸಿದರು ಬ್ರಿಟಿಷರು ದಮನಕಾರಿ ಕ್ರಮ ಅನುಸರಿಸಿ ಹತ್ತಿಕ್ಕಿದರು.ಮೊದಲ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧಿಜಿ ಭಾಗವಹಿಸಲಿಲ್ಲ 1931 ರ ಗಾಂಧಿ-ಇರ್ವಿನ್ ಒಪ್ಪಂದದೊಂದಿಗೆ 2ನೇ ದುಂಡು ಮೇಜಿನ ಸಮ್ಮೇಳನದಲ್ಲಿ ಗಾಂಧೀüಜಿ ಭಾಗವಹಿಸಿದರು ಮತ್ತು ಕಾಂಗ್ರೆಸ್ ಮಾತ್ರ ಭಾರತವನ್ನು ರಾಜಕೀಯವಾಗಿ ಪ್ರತಿನಿದಿಸುತ್ತದೆ ಹಾಗು ಯಾವುದೆ ಪ್ರತ್ಯೇಕ ಮತದಾನ ಮುಸ್ಲಿಮರಿಗೆ ಹಾಗೂ ಅಸ್ಪøಶ್ಯರಿಗೆ ಒದಗಿಸಬಾರದೆಂದು ಪ್ರತಿಪಾದಿಸಿದರು,ಇಂಗ್ಲೆಢಿನ ಪ್ರಧಾನಿ ಮೆಕೆಡೊನಾಲ್ಡ ಪ್ರತ್ಯೇಕ ಮತದಾನ ವ್ಯವಸ್ಥೆ ಘೊಷಿಸಿದಾಗ ಗಾಂಧೀಜಿ ವಿರೋಧಿಸಿದರು. ಗಾಂಧೀಜಿ-ಅಂಬೇಡ್ಕರ್ ನಡುವೆ ಬಿನ್ನಾಭಿಪ್ರಾಯ ಉಂಟಾಯಿತು ಆದರೆ ಪೂನಾ ಒಪ್ಪಂದದೊಂದಿಗೆ ಕೊನೆಗೊಂಡತು.

 ತೃತೀಯ ದುಂಡುಮೇಜಿನ ಸಮ್ಮೇಳನದಲ್ಲಿ ಗಾಂಧೀಜಿ ಭಾಗವಹಿಸಲಿಲ್ಲ ಆದರೆ ಅಸ್ಪøಶ್ಯತೆ ನಿರ್ಮೂಲನೆಗಾಗಿ ಭಾರತದಾದ್ಯಂತ ಸಂಚರಿಸಿ ಕೆಟ್ಟ ಆಚರಣೆ ಬಗ್ಗೆ ತಿಳುವಳಿಕೆ ನೀಡಿದರು.ದ್ವಿತೀಯ ಮಹಾಯುದ್ದದಲ್ಲಿ ಭಾರತದ  ಒಪ್ಪಗೆ ಇಲ್ಲದೆ ಭಾರತವು ಮಿತ್ರ ರಾಷ್ಡ್ರಗಳ ಪರವಾಗಿ ಭಾಗವಹಿಸುವದೆಂದು ಬ್ರಿಟಷರು ಘೋಷಿಸಿದರು, ಪರಿಣಾಮವಾಗಿ ಗಾಂಧೀಜಿಯವರು ವೈಯಕ್ತಿಕ ಸತ್ಯಾಗ್ರಹ ಆರಂಭಿಸಿದರು.

 ಭಾರತೀಯರನ್ನು ಮನವೊಲಿಸಲು ಮಾಡಿದ ಅಗಷ್ಟ ಪ್ರಸ್ತಾಪ ಹಾಗೂ ಕ್ರಿಪ್ಸ ಸಂಧಾನಗಳು ವಿಫಲವಾದವು, ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಬಾಂಬೆ ಯಲ್ಲಿ ಸಭೆ ಸೇರಿ ಭಾರತ ಬಿಟ್ಟು ತೊಲಗಿ ನಿರ್ಣಯ ಠರಾವು ಸ್ವೀಕರಿಸಿ ಗಾಂಧೀಜಿಯರನ್ನು ನೇತೃತ್ವ ವಹಿಸಲು ಕೊರಿತು, ಗಾಂಧೀಜಿ ಮಾಡು ಇಲ್ಲವೆ ಮಡಿ ಘೋಷಣೆ ನೀಡಿದರು.ಗಾಂಧೀಜಿಯವರನ್ನಲ್ಲದೆ ಪ್ರಮುಖ ನಾಯಕರನ್ನು ಬಂದಿಸಿದರು ಪರಿಣಾಮವಾಗಿ ಹಿಂಸಾತ್ಮಕ ಚಳುವಳಿ ನಡೆದವು ಆದರೆ ಬ್ರಿಟಿಷರು ಅವುಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾದರು.

 2ನೇ ಯದ್ಧಾನಂತರ ಕ್ಯಾಬಿನೆಟ್ ಆಯೋಗ ರಚಿಸಿದರು.ಮುಸ್ಲಿಮ ಲೀಗ್ ನೇರ ಕಾರ್ಯಾಚರಣೆಗೆ ಕರೆ ನೀಡಿತು.ಕೊಲೆ ಸುಲಿಗೆಗಳಾದವು 1946 ರಂದು ಮೌಂಟಬ್ಯಾಟನ್ ಮಾತುಕತೆ, 1947 ರಂದು ಸಂವಿಧಾನ ಕಾಯಿದೆ ಜಾರಿಯಾಗಿ ಊರ್ಜಿತವಾಯಿತು. ಭಾರತ ದೇಶ ಇಬ್ಬಾಗವಾಗಿ 1947 ಅಗಷ್ಟ 15 ರಂದು ಭಾರತ ದೇಶ ಸ್ವಾತಂತ್ರ್ಯ ಪಡೆಯಿತು.

      ಹಿಗೆ ಭಾರತದ ರಾಷ್ಟ್ರೀಯ ಚಳುವಳಿಯಲ್ಲಿ ಗಾಂಧೀಜಿಯವರು ಸತ್ಯ ಅಹಿಂಸೆ ಸತ್ಯಾಗ್ರಹ ಅಸû್ರಗಳನ್ನು ಬಳಸಿ ರೈತರು ಕಾರ್ಮಿಕರನ್ನೊಳಗೊಂಡು ಚಳುವಳಿಯನ್ನು ಸಂಘಟಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ

5 comments:

ಮೊಹರಂ

      ಹಬ್ಬಗಳ ಉದ್ದೇಶವೆ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು, ಬಂದು ಬಾಂಧವರು ಹತ್ತಿರ ಸೇರುವುದು, ಹಳಸಲು ಕಶ್ಮಲಗಳು ಹರಿದ ಹೋಗಿ ಹೊಸ ಉತ್ಸಾಹ ತುಂಬಿ ಬರುವುದಾಗಿದೆ. ಇ...