Monday, March 30, 2020

ಕೊರೋನಾ ಸಮರ

ನಾವು ಸಮರ್ಥರು ನಾವು ಭಾರತೀಯರು
ರೋಗ ಪ್ರವಾಹ, ದಾಳಿ ಪ್ರಹಾರ
ಅರಿತೆ ಮುನ್ನೆಡೆದವರು, ಒಂದೆ ಎರಡೆ
ಸಾವಿರ ಸಂವಾಹರ ಮಾಡಿದವರು.//

ಕೊರೊನಾ ರೋಗಾಣು ಶರಣು ತರಲು
ಶಪತ ಮಾಡಿದವರು
ಪ್ರಧಾನಿ ಕರೆಗೆ ನಿಧಾನ ಮಾಡದೆ
ಗದೆ ಗುರಣಿ ಹಿಡಿದವರು
ವೈದ್ಯ ದಾದಿ, ಕರೊನಾ ವದೆಗೆ
ನಿತ್ಯ  ದುಡಿಯುವರು  //

ಗಾಂಧಿ ತಾತ ಸ್ವಾತಂತ್ರ್ಯಕ್ಕಾಗಿ ಉಪವಾಸ
ಇಪ್ಪತ್ತೊಂದು ದಿನ
ಪ್ರಧಾನಿ ನೇತಾ ಕೊರೊನಾಕ್ಕಾಗಿ
ಲಾಕಡೌನ ಇಪ್ಪತ್ತೊಂದು ದಿನ
ಘೋಷ ಒಂದೆ ,ಸಮೂಹ ದಂತರ
ಪಾಲಿಸುವವರು //

ಜೈಲು ಕರಿನೀರು ಹೊಸದೆನು
ಹಿರಿಯರು ಹಾಕಿದ ಮಾರ್ಗ
ಮನೆಯೇ ಜೈಲೆಂದರೆ ಹಿಂಜರಿತಾರೆನು
ಕರೊನ ಕ್ಕಿಂತ ಕಹಿ ಆಂಗ್ಲರ
ಆಡಳಿತ ಕಂಡವರು, ಕೊರೊನಾ
ಕಿತ್ತೊಗೆಯುವವರು //
                       ಬಸನಗೌಡ ಗೌಡರ
                            ಉಪನ್ಯಾಸಕರು 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...