Friday, April 10, 2020

ಯುದ್ಧ

ಯುದ್ಧ

ಕಾಣದೆ ಬಂತು ಬಿರು ಗಾಳಿ ತಂತು
ಕೌರವನ ಕೊರೊನಾ ದಾಳಿ ಬಂತು
ಮಾಡುವದೆನು ಹಾಡುವುದೆನು
ಮನೆಯಲ್ಲಿದ್ದೆ ಗೆಲ್ಲಬೇಕು ಅದನು /ಪ/

ಕೊರೊನ ಕಂಪನ ನೆಡೆಯಾಕಿಲ್ಲ
ಕೃಷ್ಣನ ಕೈವಾಡ ಕಾಣದೆ ಬಂತಲ್ಲ
ಇಡಿ ಭರತಖಂಡವೆ ಕುರುಕ್ಷೇತ್ರ
ಪಾಂಡವರೆಮಗೆ ತಿಳದಿಲ್ಲೇನು?

ಪೊಲೀಸ್, ನರ್ಸ್, ಆಶಾ ಅಕ್ಕ
ದೇಶ ಕ್ಕಾಗಿ ದುಡಿತಾರ ಪಕ್ಕಾ
ವೈದ್ಯರ ದಂತು ಹೇಳುವ ಹಾಗಿಲ್ಲ
ಕೃಷ್ಣನವತಾರ ದುಡಿತಾರಲ್ಲ  //

ನೀರೆ ಅಸ್ತ್ರ ನಾರಿಯರೆ ಮುಂದೆ
ನರಕಕ್ಕೆ ಕಳಸದೆ ಬಿಡತೆವೆನು ನಿನ್ನ
ನೈರ್ಮಲ್ಯ ಕರವಸ್ತ್ರ, ಮಾಸ್ಕ ಮುಂದೆ
ಬರಕಾಸ್ತು ಮಾಡದೆ ಬಿಡತೇವನ ನಿನ್ನ 

ಕಾಕಿ ಅಣ್ಣನ ಲಾಟಿ ನೋಡಿ
ಕಲ್ಯಾ ಮಲ್ಯಾ ಕರಗ್ಯಾರ್ ನೋಡು
ಮಲ್ಯಾ ಭೀಮ್ಯಾಗ ಮನೆ ಬಿಡಾರ
ಸಮೂಹವೆಲ್ಲ ಅಂತರ ಬೀಡು. //

🖋️ ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...