Friday, April 10, 2020

ಗೌರವಿಸಿ

ಗೌರವಿಸಿ

ದುಡಿಯದೆ ಸಂಬಳ ಕೊಡುವ
ಸರಕಾರ ಇರುವಾಗ ಮನಿಯಾಗ
ಇರಾಕ ಏನ್ರೊ  ನಿಮಗ ದಾಡಿ.(2)/ಪ/

ಹೊರಗ ಬರತಿರಿ ಹೊರಿಯಂಗ
ಕುರಿ ದೊಡ್ದಿ ಬಿಟ್ಟ ಬಂದಾಂಗ   
ಪೋಲಿ ಹಡುಗರು ಪಟಿಂಗರಂಗ
ತಿರಗತಿರ ಪಿರಿ ಪಿರಿಯಾಂಗ.   //

ಪೊಲೀಸರು ಕೊಡಾ ಮನುಷ್ಯರಪ್ಪ
ತಾಳ್ಮೆ ಪರೀಕ್ಷೆ ಮಾಡ ಬ್ಯಾಡರಪ್ಪ 
ಪಟಾರ ಅಂತಾ ಬಾರಸ್ತಾರ ಬಪ್ಪ
ತಿಳಿದಿದ್ದರ ಜೈಲಿಗೆ ಕಳಸ್ಟಾರ ತಿಪ್ಪ//

ಜಗತ್ತ ತಿಪ್ಪರಲಾಗ ಹಾಕಿ ತಿಣಕಾಡಿದರ
ತಿಳಿಯವಲ್ಲದು  ರೋಗ ತಳತನಕ
ವೈದ್ಯ ನರ್ಸ ದುಡಿತಾರ ನಮಗಾಗಿ ಬೆಳತನಕ
ಮನುಷ್ಯರಾಗಿ ದಂಡಿಸಿಕೊಳ್ಳದೆ ನಾವೆಲ್ಲ ಅರಿಯಬೇಕ //

ತಪ್ಪಿನಡೆದರ ತಿಪ್ಯಾಗ ಬಿದ್ದು ಸಾಯಿತಿರಪ್ಪ
ಒಪ್ಪಿ ನಡೆದರಿನ್ನಷ್ಟ ದಿನ ಬಾಳತಿರಪ್ಪ
ತಿಳಿದವರು ಹೇಳಿದಂಗ ಕೆಳದಿದ್ದರ
ಮುನಸಿಪಾಲ್ ಹೆಣ ಅಗತಿವಪ್ಪ//

               ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...