ಮಂದಿರ ಮಸೀದಿಗಳನ್ನಿಂದೀಕರಿಸಿ
ಓ ಮಾನವರೆ
ಅವುಗಳನ್ನಿಂದೀಕರಿಸಿ
ಓ ಮಾನವರೆ. //ಪ//
ಧರ್ಮವೆಂದರೆ ಸತ್ಯದ ಕಾಯಕ
ಸಂಸ್ಕಾರವೆಂದರೆ ಶಿಸ್ತಿನ ಕಾಯಕ
ಮರ್ಮ ಅರಿಯೋಣ
ಬದುಕ ಕಟ್ಟುವ ಕೇಂದ್ರಗಳಲ್ಲ
ಪಂತ ಪಂಗಡ ಬೆಳೆಸಲು
ಹೇಳಿಯೇ ಇಲ್ಲ //
ಸಂತ ಮಹಾಂತರ ತಂತ್ರ ಒಂದೆ
ಸನ್ಮಾರ್ಗ ಸನ್ನಡತೆ
ಮಂತ್ರತಾನೊಂದೆ.
ಸಾವು ಬದುಕು ಸಹಜ ಕ್ರಿಯೆ
ಹುಟ್ಟು ಸಾವಿಗೆ
ಕ್ರಿಯಾವಿಧಿ ಬೇಕೆ //
ರಾಮ, ರಹೀಮ್, ಅಬ್ರಹಾಂ, ಸಿಂಗ್,
ರಾಗಿ ಬೆಳೆಯಲು
ಭೂಮಿಗೆ ಬರಬೇಕು
ಗಣಕ ಯಂತ್ರ ಭಯಂಕರ ತಂತ್ರ
ಭಾರ ಇಳಿಸಲು
ಅಳವಡಿಸಿದ ತಂತ್ರ //
ಮುಲ್ಲಾ ಸ್ವಾಮಿ ಎಲ್ಲರೂ ಕೂಡಿ
ಮಾನವತೆ ಬೆಳೆಸಲು
ಬಯಲಿಗೆ ಬರೋಣ//
ರಾಷ್ಟ್ರ ಕಟ್ಟಿದ ನಾಯಕರೆಲ್ಲ
ದೇಶ ಸ್ವತಂತ್ರ ಗೊಳಿಸಲು
ಧರ್ಮ ಎಣಿಸಿಯೆ ಇಲ್ಲ
ಬಸನಗೌಡ ಗೌಡರ
ಓ ಮಾನವರೆ
ಅವುಗಳನ್ನಿಂದೀಕರಿಸಿ
ಓ ಮಾನವರೆ. //ಪ//
ಧರ್ಮವೆಂದರೆ ಸತ್ಯದ ಕಾಯಕ
ಸಂಸ್ಕಾರವೆಂದರೆ ಶಿಸ್ತಿನ ಕಾಯಕ
ಮರ್ಮ ಅರಿಯೋಣ
ಬದುಕ ಕಟ್ಟುವ ಕೇಂದ್ರಗಳಲ್ಲ
ಪಂತ ಪಂಗಡ ಬೆಳೆಸಲು
ಹೇಳಿಯೇ ಇಲ್ಲ //
ಸಂತ ಮಹಾಂತರ ತಂತ್ರ ಒಂದೆ
ಸನ್ಮಾರ್ಗ ಸನ್ನಡತೆ
ಮಂತ್ರತಾನೊಂದೆ.
ಸಾವು ಬದುಕು ಸಹಜ ಕ್ರಿಯೆ
ಹುಟ್ಟು ಸಾವಿಗೆ
ಕ್ರಿಯಾವಿಧಿ ಬೇಕೆ //
ರಾಮ, ರಹೀಮ್, ಅಬ್ರಹಾಂ, ಸಿಂಗ್,
ರಾಗಿ ಬೆಳೆಯಲು
ಭೂಮಿಗೆ ಬರಬೇಕು
ಗಣಕ ಯಂತ್ರ ಭಯಂಕರ ತಂತ್ರ
ಭಾರ ಇಳಿಸಲು
ಅಳವಡಿಸಿದ ತಂತ್ರ //
ಮುಲ್ಲಾ ಸ್ವಾಮಿ ಎಲ್ಲರೂ ಕೂಡಿ
ಮಾನವತೆ ಬೆಳೆಸಲು
ಬಯಲಿಗೆ ಬರೋಣ//
ರಾಷ್ಟ್ರ ಕಟ್ಟಿದ ನಾಯಕರೆಲ್ಲ
ದೇಶ ಸ್ವತಂತ್ರ ಗೊಳಿಸಲು
ಧರ್ಮ ಎಣಿಸಿಯೆ ಇಲ್ಲ
ಬಸನಗೌಡ ಗೌಡರ
No comments:
Post a Comment