Sunday, April 12, 2020

ಕಾಲ ಚಕ್ರ


ವನ್ಯ ಮೃಗಗಳನ್ಯಜಿವಿಗಳಲ್ಲ
ತನ್ನೊಡನೆ ಬೆಳೆದುಬಂದವುಗಳು
ಜೀವ ವಿಕಾಸದ ಹಾದಿಯಲ್ಲಿ,
ನಾವು ಮುಂದೆ ಅವು ಹಿಂದೆ ಹಿಂದೆ. //

ನಮ್ಮದೆ ಸಾಮ್ರಾಜ್ಯ ಆಳುವ
ಧನಿಕನ ದರ್ಪಕ್ಕೆ ನಲುಗಿದವು
ಒಂದು ಮತ್ತೊಂದು ಇನ್ನೊಂದು
ಅಂಕುಶ ಇರಲಿಲ್ಲ ಇಲ್ಲೊಂದು . //

ಚಿರತೆ, ಆನೆ ,ಹುಲಿ ,ಸಿಂಹಗಳೆ
ಅಳಿವಿನಂಚಿಗೆ ಬಂದು ನಿಂತವು
ಮ್ಯಾಮತ್ ,ಡೂ ಡೊ,  ದೈನೊಸಾರ
ಕಾಣದಂತೆ ಕಣ್ಮರೆಯಾದವು. //

ದೊಡ್ಡ ಪ್ರಾಣಿಯ ಸದ್ದಡಗಿಸಿ
ಗೆದ್ದೆನೆಂದು ಬಿದ್ದ ಮಾನವ ಪ್ರಾಣಿ
ಗೆದ್ದವರಾರು ಬಿದ್ದವರಾರು
ಕ್ಷುದ್ರ ಜಿವಿಗೆ ಹೆದರಿ ಬಿದ್ದವರಿವರು./

ನಮ್ಮಪ್ಪತಾತ ಎತ್ತಿಗೆಹಾಕತಿದ್ದರುಚಿಕ್ಕಾ
ಸುತ್ತೆಲ್ಲ ಮೂಸದಿರಲೆಂದು ಹಾಕಿ ಲೆಕ್ಕ
ಏದುಸಿರು ಬಿಡುತ್ತಾ ಏಗಿತ್ತು  ಎತ್ತು
ಕಾಲಚಕ್ರ ಮೆರೆದವಗು ಮಾಸ್ಕ ಬಿತ್ತು //

                       ಬಸನಗೌಡ ಗೌಡರ
                            ಉಪನ್ಯಾಸಕರು

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...