Thursday, April 9, 2020

ಗಟ್ಟಿ ತನ.

ಗಟ್ಟಿ ತನ

ಪ್ರಿತಿ ಗುಂಗಿನ ರಂಗಿನಾಟಕೆ ಸೋತೆ
ಖಾತೆ ತೆಗೆಯುವವರಿಗಿಲ್ಲ ಖ್ಯಾತೆ
ಪುಂಖಾನು ಪುಂಖ ಹರಿಯಿತು ಗೀತೆ
ರವಿ ಜಾರಿ ಮರೆ ಯಾದ ಮರುಕ್ಷಣವೆ
ಭರತನಾಟ್ಯ ಕಥಕ್ಕಳಿ ಮೊಹಿನಿ ಅಟ್ಟ0
ಭಾಸ್ಕರನುದಯವೆ ಶೋಕ ಗೀತೆ.//

ನಕಲು ಪ್ರತಿಗಳ ಪಕಳೆಯುದುರಿ
ಸಕಲರು ಥಕ ತೈ ತುತ್ತೂರಿ
ನಕುಲ ಸಹದೇವ ನಾಮಕರಣ
ಸಖಿ ಸಂಭ್ರಮ ಸಾವಿರ ಗಣ
ಸಿದ್ದಿ ಪುರಷನ ಗುಣಗಾನ
ಸಂಡೆ ಮಂಡೆ  ಜಪ ಧ್ಯಾನ. //

ಸಾಗಿದವು ಸರಸ ಸಲ್ಲಾಪದ ದಿನ
ಬಾಗಿದವು ವಿರಸ ನೀರಸ ದಿನ
ಸಂಸಾರ ಮೆಟ್ಟಲು ಬೇಕು ಗಟ್ಟಿತನ
ಅಟ್ಟನಗಿ ಹುಟ್ಟು ತಲೆ ಕುಟ್ಟಿ
ಗಟ್ಟಿ ಮಾಡಿದಳು ಮನ ತಟ್ಟಿ
ಅರಿತೆ ಸಮರಸವೆ ಈಗ ಗಟ್ಟಿತನ //



🖋️ ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...