Thursday, April 9, 2020

ದೂರ ಸುಖ

ದೂರ ಸುಖ

ವಿರಹ ವೇದನಿಗಿಂತ ಮಿಗಿಲೇನು
ಮಿಗಿಲೆನಗೆ ನೆನೆವುದೆ ಸುಖ
ಸನಿಹವೆನಗೆ ಕ್ಷಣಿಕ ಸುಖ
ಇನಿಯಾ ನಿನ್ನ ನೆನಪೆ ಸ್ವರ್ಗ ಸುಖ//

ಹಕ್ಕಿ ಗೊರವಂಕ ಉಕ್ಕಿ ಹರಿವ
ನದಿ ಕೊಳ್ಳಗಲೆ ಬಕ್ಷಿಸು ಎನಗೆ
ದಕ್ಕದಿರುವೆಯಾ ಗೆನಿಯಾ
ಮಿಕ್ಕಿದ್ದೆಲ್ಲವು ಬರಿ ಕ್ಷಣಿಕ //

ಬಾನ  ಬುತ್ತಿಯನಿಕ್ಕಿ ಚುಕ್ಕಿ
ಚಂದ್ರಾಮನಿಕ್ಕಿ ಬಾರದಲೆ ಹೊದೆ
ಬರುವಿಗಾಗಿ ಕಾಯದಿರನೆ ಮಿಕ್ಕಿ
ಬನದ ಹೂವುಗಳೆ ಗೆಳೆಯರೆನ್ನ//

ಮುಂಗಾರು ತಂಗಾಳಿ ಮೈಗೆ ತಂಪು
ಅಸೆಗಳ ಬೆನ್ನೆರಿ ಬಂತು ಕಂಪು
ಕಾಗೆ ಕೋಗಿಲೆ ಭೇದವ ನಾನರಿಯೆ
ಸದಾ ಕೋಗಿಲೆಗಳ ಗಾನದ ಇಂಪು//

ಬೇವು ಬೆಲ್ಲದ ಬೆಸುಗೆ ಹೊಸ
ವರ್ಷದಾ ಗುಡುಗು ಮಳೆ
ಬಲ್ಲವರೆ ಬಲ್ಲರು ಹೂವು ತಾ
ಬೆವಿನದಾದರು ಮಲ್ಲಿಗೆಯ  ಕಳೆ //

           🖋️ ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...