Sunday, April 5, 2020

ಸತ್ಯದ ಅನ್ವೇಷಣೆ

ಸಂಬಂಧಗಳೆಂದರೆ ಬರಿ ಕೂಡಿ 
ಕಳೆಯುವ ಲೆಕ್ಕ ವಲ್ಲ ಕೋಡಿ
ಹಣ ಗಳಿಸುವ ಮಾರ್ಗ ಹಲವಾರು 
ಪ್ರೀತಿ ಕೊಡುವವರು ಬಲು ದುಬಾರಿ
ನಿನ್ನ ನಿರ್ಮಲ ಮನಸ್ಸೆ ಅದಕ್ಕೆ ದಾರಿ//

ದೀಪವೆಂದರೆ ಬರಿ ಬತ್ತಿ ಎಣ್ಣೆ
ಹತ್ತಿಯುರುವಾ ಬೆಂಕಿಯಲ್ಲ ಕೋಡಿ
ಸತ್ತ ಮೇಲೂ ಬೆಳಕು ನಿಡುವ
ಸನ್ಮಾ ರ್ಗ ತೋರಿಸುವ ದಾರಿ
ನೀನರಿಯದಿದ್ದರೆ ಅದು ದುಬಾರಿ//

ಜ್ಞಾನವೆಂದರೆ ಬರಿ  ಓದಿ
ಸಂಗ್ರಹಿಸುವ ವಿಷಯವಲ್ಲ ಕೋಡಿ 
 ಸಂಗ್ರಹಿಸುವ ಮಾರ್ಗ ಹಲವಾರು
ಅರಿವು ನಿನ್ನ ಮೋಕ್ಷಕ್ಕೆ ದಾರಿ
ನೀನರಿಯದಿದ್ದರೆ ಅದು ದುಬಾರಿ//

           🖋️.   ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...