Tuesday, May 19, 2020

* ಭಾವತರಂಗ *

ಭಾವಗೀತೆ ಸ್ಪರ್ಧೆಗಾಗಿ :
ವಿಷಯ : ತರಂಗ

* ಭಾವತರಂಗ *

ಹದಿಹರಿಯದ ಭಾವ ಎದೆ ಉಕ್ಕಿ ,
ನದಿಯಂತೆ ಹರಿಯತಿದೆ ಸೊಕ್ಕಿ.
ಸುಧೆ ಕೃಪೆ ಮಾಡು ಪ್ರೀತಿ ನೀನಿಕ್ಕಿ
ರಾಧಯ ಕೃಷ್ಣನಾಗುವೆ ನಾ.. ಸಾಕಿ//

ನನ್ನೆದೆಯ ಭಾವ  ಬರಿ ಬರಡು,
ನಿನ್ನ ಮೋಡದ ಮಳೆ ಹರಡು
ಕೃಷ್ಣ ಕಾವೇರಿ ಬೃಂದಾವನ
ಅನುದಿನವು  ಹಸಿರು ಬನ //

ಕಾಯಿಸದೆ ಕೃಪೆಯಿರಲಿ ಮನ
ಮರೆತು ಮಿಡಯದಿರೆ ದಿನ
ಭಾವತರಂಗ ಜಲತರಂಗ ಕಣ
ಅಂತರಾತ್ಮದ ವಿಪ್ಲವ ಅನುದಿನ //

ನೀನೊಲಿದ ದಿನ ಹಾಲು ಜೇನು
ನಗುನಗುತಾ ಸ್ವರ್ಗ ಸವಿದ ದಿನ
ನವನವೀನ ಗಾನ ಸರ ಸಂಚಲನ
ಗಂಧರ್ವಗಾಯನ ನನ್ನ ಭಾವಮನ //

ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...