Saturday, May 9, 2020

* ವಾದ ಪ್ರತಿವಾದ *

ಆಟದೊಳ ನೂರೆಂಟು ಕಬಡ್ಡಿ
ಕ್ರಿಕೆಟ್ ಖೋಖೋ ಅಟ್ಯಾ ಪಟ್ಯಾ,
ಮೇಲೆ ಕೆಳಗಿಲ್ಲ ನಾಡಿನ ಆಟದಲ್ಲಿ  //
ಅಕ್ಷರ,ಪದ,ಭಾವ,ವಾಕ್ಯ ಕುಣಿಸುವ
ಬರಹವುಂಟು ಮೇಲೆ ಕೆಳಗಿಲ್ಲ, /
ಸಾಹಿತ್ಯದಾಟದಲ್ಲಿ ಸರಿಸಮವೆಲ್ಲ
ಬಗೆ ಬಗೆ ಆಟ ಕಾವ್ಯಪ್ರತಿಭೆಗೆ /
ನಾಡಿನಲ್ಲುಂಟು.. ಬೆಲೆ ತಿಳಿದವರಿಗೆ
ಪಾಠ, ತಿಳಿಯದವರಿಗಿಲ್ಲ.//

ಕುವೆಂಪು, ಬೇಂದ್ರೆ,ಕಾರಂತ,
ಗೋಕಾಕ ಮಾಸ್ತಿ ಅನಂತ ಮೂರ್ತಿ
ಕಾರ್ನಾಡ ಕನ್ನಡದ  ಆಸ್ತಿ, ಕನ್ನಡದ
ಆಲಮರ, ತಂಪನ್ನೆರೆದವರು/
ಭಾವ  ಭಾಷೆ, ಬೆಸುಗೆಗೆ,
ಭಾಷೆ ಉಳಿದರೆ. ಸಂಸ್ಕೃತಿ,...ಪ್ರಗತಿ .
ಉಳಿವಿಗೆ ಜನಪದವೇ ಭೂತಾಯಿ/
ಹುಟ್ಟು ಸಾವಿಲ್ಲಿ ......ಕೊಯಿಲುಗೆ
ಕಿತ್ತಾಡುವ ಪಂಡಿತರೆ ವಾಗ್ವಾದಕ್ಕಿಲ್ಲ ಜಾಗ!
ಕರುನಾಡು ಕವಿಗಳ ಸಾಹಿತ್ಯ
ಫಲಪುಸ್ಪ ಬೇಳೆ ಜಾಗ


             ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...