Friday, May 8, 2020

* ಕುರುಚಲು ಕೀಳಲ್ಲ *

 * ಬಯಲು ಆಲಯ *
ದೂರಗುಡ್ಡದಲಿ ಸಾವಿರ ಸರಬಂಡೆ
ಕುಳಿತು ಪ್ರಕೃತಿ ಸವಿಯಲು ನಾ ಬಂದೆ
ಸಂಜೆ ತಂಗಾಳಿ ಬೀಸಿ ಬಡಗಣದಿ ತೇಲಿ
ಸಂಚಲನ ಮೈಮನದಿ  ಪುಲಕಗೊಂಡೆ

ಏತ್ತರದ ಬಂಡೆಯೇರಿ ಸುತ್ತಲು ಮೈಮರೆತು
ಕತ್ತೆತ್ತಿ ನೋಡಿದಡೆ ಮನೆ ಮರಗಳ ಸಾಲು
ಜಾರುತಿವೆ ನರಿ ತೊಳ  ಕೌಜಗದ ಸಾಲು
ಸೋತ ರವಿ ಜಾರಿ, ಬಂತು ಚಂದ್ರನ ಪೇರಿ

ಕತ್ತಲದ  ಗುಮ್ಮವೇರಿ ಸುತ್ತಿದೆ ಸಾವಿರ ಸೈನ್ಯ
ಗತ್ತಿನ ಟೀವಿಯ ಬಿರು ಬಿಗುವಿನ ಕಾಲಾಳು
ಅವರೆ ಜಾಲಿ, ತುಗಲಿ, ಬೇವು ಗೂಟಗಳ್ಳಿ
ಗರ್ವದಲಿ ಹೇಳಿದರು ಮಲೆನಾಡಿಗಿಂತ ಕೀಳಲ್ಲ

ಕೆಲಮಳೆಯೆ ಸಾಕೆಮಗೆ ಚಿಗುರಿ ಚಿತ್ತಾರ
ಆಡುಕುರಿ ಹೋತ ಟಗರು ನನ್ನಾಶ್ರಿತರು
ಬಯಲು ಆಲಯವೆ ನಮ್ಮ ಸಿಂಗಾರ
ಮಲೆನಾಡಿನಂತಿಲ್ಲ ನಮ್ಮ ಕನಸುಗಾರ

ನೀವು ಕಲಿಯಬೇಕಾಗಿದೆ ನಮ್ಮಿಂದ
ಕಷ್ಟವನ್ನು ಇಷ್ಟಪಡುವುದು ಹೇಗೆಂದು
ಮಳೆಗಾಳಿ ಬಿಸಿಲು ಬರ ನಮ್ಮ ವೈರಿ
ಬದುಕಿ ತೋರಿಸುವೆವು ನಿಮಗೆ ಸಾರಿ

ನೀರಾದೆ ನಮ್ಮವರ ಕೀಳುರಮೆಕಂಡು
ನಾನು ನಿಮ್ಮಂತೆ ಬೆಳದೆ  ಕೊರತೆಗಳು0ಡು
ಉಸಿಗಿನಲ್ಲಿ ಹಸಿರು ಉಕ್ಕಿಸಿದೆ ಛಲದಿಂದ
ಉಸಿರೆ ಛಲವಾಗಲಿ ನಿಮ್ಮ ಉತ್ಸಾಹದಿಂದ

             ಬಸನಗೌಡ ಗೌಡರ 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...