Saturday, May 9, 2020

* ಅಮ್ಮಾ*

 
ಅಮ್ಮ ಬರವಣಿಗೆಗೆ ನಿಲುಕದ ಪದ
ನನ್ನ ಭೂಮಿಗೆ ಪರಿಚಯಿಸಿದಳಮ್ಮ
ಅಮ್ಮನಿಲ್ಲದ ಜಗದಲ್ಲಿ  ನಮ್ಮದೆನಿದೆ
ನವಮಾಸ ನೋವುಂಡು ಭುವಿಗೆ ತಂದಳಮ್ಮ  //

ಹಸಿದ ಹೊಟ್ಟೆಗೆ, ಬಟ್ಟೆಯ ಕಟ್ಟಿದವಳು
ಹೊಸಬಟ್ಟೆಯುಡಿಸಿ ಹರಿದ ಸೀರಿಯಲಿ
ನಗುನಗುತಾ ಸಂಭ್ರಮವ ಪಟ್ಟವಳು
ಕರುಳು ಬಳ್ಳಿ ಅರಳಲು ಕರಕಲಾದವಳು

ದೇವರು ನಾವು ಹುಟ್ಟಿಸಿದಾ ಪದ
ನಿಸರ್ಗದ ನಿಗೂಢ ತಾ ಅರಿಯದೆ
ನನ್ನವರೆ ಸಂಶೋಧಿಸಿದ ಶ್ರೇಷ್ಟಪದ
ತಾಯಿ ದೇವರಿಗಿಂತ ದೆವರಿನ್ಯಾವದು //

ಸೋಮಾರಿಯಾದಾಗ ತಿದ್ದಿದವಳು
ಕ್ಷಮಿಸಿ ಸಂತೈಸಿ ಸರಿದಾರಿ ತೋರಿದವಳು
ಕಲಿಸುವಾಗ ಸಿಡುಕಿ ಗದರಿಸಿದವಳು
ಶಿರಬಾಗುವ ಮೂದಲ ಗುರುವೆ ಅಮ್ಮ  /

ತಾಯಿ,ಅವ್ವ,ಅಮ್ಮ ಹೇಗೆ ಕರೆಯಲಿ
ಅಮ್ಮನಿಗೆ ಸರಿಸಮವುಂಟೆ ಜಗದಲ್ಲಿ
ಉಸಿರನು ನೀಡಿ ಹೆಸರಾಗಿಸಿದಳಿಲ್ಲಿ
ನಮ್ಮನ್ನು ಹರಿಸಲು ನೀ ಬಾಳಬೇಕಿಲ್ಲಿ

             ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...