Saturday, September 19, 2020

* ನನ್ನವಳು *

ಹೃದಯದ ಬಡಿತಕ್ಕೆ ಧ್ವನಿಯಾಗಿ

ಕಣ್ಣು ರೆಪ್ಪೆಯ ಸಪ್ಪಳಕೆ ಬೆಚ್ಚಿ

ನೆರಳಿನಂತೆ ನನ್ನ ಹಿಂದೆ ಸುಳಿದು

ಹಾಡಿನ ಪಲ್ಲವಿಯಾದವಳಿವಳು//


ಉಪವಾಸದಿ ಉಂಡಂತೆ ನಟಿಸಿ

ನಾನುಂಡ ಸಂತೋಷ ತಾನುಂಡಂತೆ 

ಹೊರಹಾಕಿ ನರಕ ದೂರ ಸರಸಿ

ನಗುತ ನನ್ನರಸಿ  ಹೆಜ್ಜೆ ಹಾಕಿದವಳು //


ಬಂಡಿ ಕೀಲವಳು ದಂಡಿನ ಸಿಪಾಯಿ 

ಶ್ರೀಗಂಧದಂತೆ ಸುವಾಸನೆ ಬೀರಿದವಳು 

ಗಂಡನೆ ದೇವರೆಂದು ಪೂಜಿಸಿದವಳು

ಮನೆ ಮಂತ್ರಾಲಯ ಮಾಡದವಳು //


ನೋವಿನಲ್ಲೂ ನವಿಲಿನಂತೆ ಕುಣಿದು

ನಡಬಾಗಿಸಿ ನರ್ತಿಸಿ ಕೀರ್ತಿ ತಂದವಳು

ತವರಿನ ಸಿರಿತನದ ನಲಿವು ಮರೆತವಳು

ತಂಗಳುಂಡರು ತೂಗಿ ನಡೆದವಳು //


ಮಾತಿಗೆ ಮಾತು ಬೆಳೆದಾಗ ಸೋತು

ಮೌನದಲಿ ಉತ್ತರ ನೀಡದವಳು

ಹೊತ್ತು ಹೊತ್ತಿಗೆ ನನ್ನ ಚಿತ್ತವ ಕದ್ದು 

ತನ್ನ ಸುತ್ತ ತಿರುಗಿಸಿದಳು ನನ್ನವಳು//


           🖋️  ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...