Monday, September 21, 2020

* ಹುತ್ತದ ಸುತ್ತ *

ಮಾಯಾ ನಗರವಿದು ಮಾಯಾಂಗನೆ

ಮೆರೆಯತಿರುವಳು ಜಗದ ತುಂಬಾ

ಮನದ ಮೂಲೆಯಲ್ಲಿ ನೆಟ್ಟಾಳ ಕಂಬ

ಮರೆತರೆ  ಒಗೆಯತಾಳೊ ಹುಂಬ//


ಬೆಳೆಯುವವ ಬೆಳೆಯಲಿ ಮರದೆತ್ತರ

ರವಿ ಬೆಳೆದ ಮೇಲೆ ನೆರಳಿದಕೆ ಉತ್ತರ 

ಸಂತೋಷ ಪಡಲು ಬರಬೇಕು ಹತ್ತಿರ 

ಕತ್ತರಿಸಬೇಕು ಸದಾ ಮತ್ಸರದ ಹುತ್ತ//


ಥಳಕು ಬಳುಕಿನ ತಾಮಸ ಬದುಕು 

ಕೆದಕಿದರದು ಬರಿ ಹರಕು ಮುರಕು 

ಕಾವಿ ಬಟ್ಟೆಯನ್ನೂ ಬಿಟ್ಟಿಲ್ಲ ಮತ್ತು

ಕಾಲವೆ ತರುವುದು ಇದಕೆಲ್ಲ ಕುತ್ತು//


ಮತ್ತಿಗೆ ಬೆನ್ನು ಹತ್ತಿದವರ ತಾಕತ್ತು 

ಹೊತ್ತು ಏರಿದಾಗ ಬರತಾವು ಹಕಿಕತ್ತು

ಅದು ಇಳಿದಾಗ ಅದಕಿಲ್ಲ ಕಿಮ್ಮತ್ತು

ಈಗ ಕೇಳಲು ನಮಗಿಲ್ಲ ಪುರಸೊತ್ತು//


           ಬಸನಗೌಡ ಗೌಡರ 


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...