Friday, September 25, 2020

ಭಾವ ಪೂರ್ಣ ಶ್ರದ್ಧಾಂಜಲಿ

 *ಸ್ವರ ಸಾಮ್ರಾಟನಿಗೆ*


ಹಾಡುವ ಕೋಗಿಲೆಯ ದ್ವನಿಯ 

ನಿಲ್ಲಿಸಿದೆ ಹೇ, ಪರಶಿವ ನೀ.. 

ಕ್ರೂರಿಯೇ!

ಸಾವಿರ ಸಾವಿರ ಸ್ವರ ಗಾನ

ಸಿಂಚನ ಗೈದು..!

ಕೋಟಿ ಹೃದಯ ನಿನ್ನ ಪಾದಕೆ ತಂದ

ನಾದ ಲೋಕ ನಿರ್ಮಿಸಿದವನಿಗೆ 

ಈ ಪರಿಯೇ, .......

ನಿನ್ನ ಸ್ಮೃತಿಗೆ ಗ್ರಹಣ 

ಹಿಡಿದು ಭೂ ಲೋಕದಲ್ಲಿ 

ಗಂಧರ್ವ ಲೋಕ ಸೃಷ್ಟಿಸಿದ 

ಗಾನ ಗಾರುಡಿಗನಿಗೆ ಇದು ನ್ಯಾಯವೇ...!

ಸಂಗೀತ ಲೋಕ ಸಂಪತ್ತಿಗೆ 

ಇನ್ನಷ್ಟು ದಿನ ಉಳಿಸ ಬಾರದೆ.

ಅರಗಿಸಿಕೊಳ್ಳಲಾರದ 

ಕಠೋರ ವಾರ್ತೆ...

ಜಗಕ್ಕೆಲ್ಲ ನೀಡಿ ನಿನ್ನ ಕಡೆ 

ಗಮನ ಸೆಳೆಯಲು ಮಾಡಿದ ತಂತ್ರವೇ !

ಸಂಗೀತ ಲೋಕದ ಸೂರ್ಯ. 

ಬೆಳಗುವ ನಕ್ಷತ್ರ, ಸ್ವರ ಸಾಮ್ರಾಟನ

ಆಟ ನಿಲ್ಲಿಸಿದ ನಿಪುಣ ,

ನಿನ್ನ ಸೂತ್ರದ ಪಾತ್ರ 

ಚನ್ನಾಗಿಯೇ ಮಾಡಿ 

ಎಚ್ಚರಿಸಿದ ಪರಿ ಸರಿಯೇ..!

ಮತ್ತೊಮ್ಮೆ ಎಸ್ ಪಿ ಬಿ ಜನಿಸುವಂತೆ

ಮಾಡೆನ್ನ ತಂದೆ..ಆತ್ಮಕ್ಕೆ ಚಿರಶಾಂತಿ 

ಮಾಡು ಮುಂದೆ//


  ನಮನಗಳು 

ಬಸನಗೌಡ ಗೌಡರ



 


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...