Saturday, October 10, 2020

* ಸಿಕ್ಕರೆ ಸಿಕಾರಿ *

ಶಿಕಾರಿಗಳು ನಾವೆಲ್ಲಾ ಶಿಕಾರಿಗಳು 
ಮಜಕುರ ತಿಳಿದವನೆ ಬಲ್ಲ ಎಲ್ಲಾ/
ತಕರಾರು ತೆಗೆದರೆ ಕೊಡತಾರ ಬೆಲ್ಲ
ತಗಾದೆ ತೆಗೆಯದಿರೆ ಬಕರಾ ನಾವೆಲ್ಲ//

ಸಕಲ ಕಲಾವಲ್ಲಭರು ಬೆನ್ನು ಹತ್ತತಾರ
ನೈಸಾಗಿ ಮನಸ ಮಸಾಜ ಮಾಡತಾರ
ಜೂಸ್ ಕುಡಿಸಿ ಜಾಲಾಡಿ ಬಿಡತಾರ
ಜನ್ಮ ಕುಂಡಲಿ ಎಣೆಸುತ ನಗತಾರ //

ಪೇಟೆಗೆ ಹೋದರೆ ಗ್ರಾಹಕರು ನಾವೆಲ್ಲ
ಖರೀದಿಸಿ ಬಂದವರನ್ನೆಲ್ಲ ಕುದರಿಸಿ 
ಕುದುರೆ ಮಾಡಿ ಓಡಿಸುವರು ಇವರೆಲ್ಲ 
ತಡಿ ಹಾಕಿ ಓಡದಿರೆ ಚಡಿ ಬೀಸುವರಲ್ಲ//

ವೈದ್ಯ, ವಕೀಲರೆಲ್ಲ ಶಿಕಾರಿಗಾಗಿ ಕಾದು
ಕುಳಿತಿಹರಲ್ಲ ಬುದ್ಧಿ ಇದ್ದವರಿಗೆ ಸಾದು
ಕಳ್ಳ ಕದಿಮ,ಕುಳಿತು ಬೊಜ್ಜು ಬೆಳಿಸಿದ  
ರೋಗಿ ಬೇಟೆಗಳಿಗೆ ಕಲ್ಲುಬೀಸುವರಲ್ಲ//

🖋️ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...