Monday, October 12, 2020

* ಜಿಟಿ ಜಿಟಿ ಮಳೆ *

ಮುಗಿಲಿಗೆ ಮತ್ತಿಟ್ಟು ಓಡುವ ಮೋಡ

ಇಂದು ಅವಿತಿಟ್ಟು ಜಿಗಿಯುವ ಚಿರತೆ

ಅಂದು ಕಾದು ನೋಡಿದೆ ಶಬರಿಯಂತೆ

ಮಳೆ ಓಡಿತು ಸೀತೆ ಕದ್ದ ರಾಣನಂತೆ//


ಹಗಲಿರುಳು ಹೊಗೆಯಂತೆ ಹನಿಮಳೆ

ಹೋಗಲು ಬಿಡಲೊಲ್ಲದಾವರ್ತಮಳೆ

ಹೈರಾಣಾಗುತ್ತಿದೆ  ಬಿತ್ತುವವನ ತಲೆ

ಹದಬಯಸಿದವನ ಎದೆಗೇರಿದೆ ಕಳೆ //


ಮುಂಜಾನೆ ಮುಖ ಮುಚ್ಚಿ ಕಚಗುಳಿ 

ಮಾಳಿಗೆಯ ಸಂದಲ್ಲಿ ಕಣ್ಣೀರು ಹನಿ 

ಓಣಿಗೂ ಬೇಕಾಗಿದೆ ಸಾಗರದ ಡೋಣಿ

ಮುಗ್ಧ ಮಕ್ಕಳ ಹರುಷ ಏರಿದೆ ಏಣಿ//


ಕಟ್ಟಿದಾ ಕನಸು ಕಮರುವ ಕೆಟ್ಟಕಾಲ

ಹಟ್ಟಿಯ ತುಂಬೆಲ್ಲ ಜಿನುಗುವ ಜಲ

ಕರಗಿದೆ ಮಧುರ ಕನಸಿನ ಜೀವಫಲ

ಕರಿಮೋಡ ಕರಗಿ ಬರಲಿ ರವಿಬಿಸಿಲು//


  🖋️.ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...