Tuesday, October 13, 2020

* ಪರಿಭ್ರಮಣ *

ನಾನು ನನ್ನವರೆನ್ನುವದು ಬರಿ ಭ್ರಮೆ 
ಹರಿದು ತಿನ್ನಲು ಹಾಕಿದ ಪರಿಭ್ರಮಣ
ತರಿದ ಮರಕೆ ಸುತ್ತುವುದೆ ಹಕ್ಕಿ ಗಣ 
ಹರಗುರು ಚರಣಕೆ ಎರಗಬೇಕು ಶರಣ//

ನಾನೇಕೆ ನನ್ನಾಳಿದ ನಾಡ ದೊರೆ 
ನೂರು ನಾಡನು ಗೆದ್ದು ಮೆರೆದರು 
ಕಡೆಗೊಮ್ಮೆ ಮೂರಡಿಯಲ್ಲಿ ಮುದಡಿ
ಮಣ್ಣಲ್ಲಿ ಮಣ್ಣಾಗಿ ಕೊನೆಗಾದ ಹುಡಿ//

ಬಿಡಲೊಲ್ಲದು ನನದೆನ್ನುವ ಭ್ರಮೆ
ಬಿಡದೆ ಕಾಡುವುದು ನೆರಳಂತೆ ಹೆಮ್ಮೆ 
ಬಿದ್ದರೂ ಸದ್ದಾಗದಂತೆ ಹಿಡಿವ ಬಯಕೆ 
ಗೆದ್ದವರಂತೆ ನಟಿಸುವ ಬಂಡ ತವಕ //

ಮನದ ಮೈಲಿಗೆ ತೊಳೆಯದ ನರ 
ಮೈಲುದ್ದ ನಡೆದು ಪಡೆಬಹುದೆ ವರ 
ಬೆಳಗ್ಗೆಯೆ ಸಂತಸ ಬಯಸಿದರೆ ಬರ  
ಆಸೆತೊರೆ ಸಂಜೆಯ ಬದುಕು ಸುಂದರ//     

          ಬಸನಗೌಡ ಗೌಡರ 


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...