Tuesday, October 6, 2020

* ಬಾಳಿನ ಸರ್ವಸ್ವ *

ಹಾರುತಿರುವ ಹಕ್ಕಿಗಳೆ 
ಮಿನುಗುತಿರುವ ಚಿಕ್ಕಿಗಳೆ
ನೀವೆ ನಮ್ಮ ಪ್ರೀತಿಯ ಸಾಕ್ಷಿಗಳು //

ನಡುವೆ ನಮ್ಮ ಪೋಷಕರೆ
ರಕ್ತ ಹಂಚಿಕೊಂಡ ಬಂಧುಗಳೆ 
ನೀವೆ ನಮ್ಮ ವಾದಿಗಳು//

ನೋಡುತಿರುವ ಅಂಬರವೆ 
ಹಾಡುತಿರುವ ಕೋಗಿಲೆಗಳೆ
ನೀವೆ ನಮ್ಮ ಪುರೋಹಿತರು//

ಕುಣಿಯುತಿರುವ ನವಿಲುಗಳೆ
ಕರೆಯುತಿರುವ ಗಿಳಿಗಳೆ
ನೀವೆ ನಮ್ಮ ಬಂಧುಗಳು//

ಹರಿಯುತಿರುವ ನದಿಗಳೆ
ಕರೆಯುತಿರುವ ಸಾಗರಗಳೆ
ನೀವೆ ನಮ್ಮ ದೇವರುಗಳು//

ನಮ್ಮ ಸುತ್ತುವ ಸುನಕಗಳೆ 
ಜಿಗಿಯುವ ಮಾರ್ಜಾಲಗಳೆ 
ನೀವೆ ನಮ್ಮವೈರಿಗಳು//

ನಿತ್ಯ ಚುಚ್ಚುವ ಜನಗಳೆ
ಬೆಳಕು ನೀಡುವ ಚಂದ್ರಮನೆ
ನೀವೆ ಎಚ್ಚರಿಸುವ ಗಂಟೆಗಳು// 

ಕಣ್ಣೋಟದಿಂದ ಸೆಳೆದ ಪ್ರೆಯಸಿಯೆ
ಕಂದನ ಕರುಣಿಸಿದ ತಾಯಿಯೆ
ನೀನೆ ನನ್ನ ಸರ್ವಸ್ವವು //
   
             ಬಸನಗೌಡ ಗೌಡರ 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...