Tuesday, October 20, 2020

* ಮಳೆ ಮಿಕ್ಕಿದಾಗ *

ಮಾತೊಂದು ಹೇಳಿದ್ದ ನಮ್ಮಪ್ಪ 
ನನಗೊಂದು,ಮನಸು ಅರಳಾಕ ...
ಮನೆ ಎತ್ತರ ಬೆಳೆಯಾಕ.. 
ಮಳೆಯಾದರ ಕೆಡಕಿಲ್ಲ 
ಮಗ ಉಂಡರ ಕೆಡಕಿಲ್ಲ.....!

ಮನೆಯು ಉರುಳಿತು 
ಮನಕೇರಿದ ಮತ್ತು ಇಳಿಯಿತು.  
ಕೆಡಕಾಗಿ ಹೋಯಿತಲ್ಲ, 
ಮನೆ ಮಠ ಮುಕ್ಕಾಗಿ ಹೋಯಿತಲ್ಲ ...
ಮಣ್ಣಾಗ ಮಣ್ಣಾಗಿ .....
ಮುಚ್ಚೆ ಹೋಯಿತಲ್ಲೋ  ..!

ಮರವು ಬೆಳೆದರ ಬರವು 
ಅಳಿಯಿತಂತ ವರುಣನ ಮರೆತು 
ಕೆರಿಯಾಗ ಬೆಳೆ ಬೆಳೆದವಲ್ಲ....
ಮರದೆತ್ತರ ಮನೆ ಕಟ್ಟಿ 
ಮೆಟ್ಟಿಲಿನ ಪುಟ್ಟಿಯಲೆ 
ಮರನೆಟ್ಟೆವಲ್ಲ...!

ಊರಾಗ ಗಟಾರ ಒತ್ತಿ..
ಹೊಲದಾಗ ಬದು ಒತ್ತಿ
ವಗ್ಗದ ಬೆಳೆಯಾದರು ಹಿಗ್ಗಿ ಹಿಗ್ಗಿ 
ಹೈಬ್ರೀಡ್ ಬೆಳೆದವಲ್ಲ..
ಮೇಲೆ ರಾಸಾಯನಿಕ ಗೊಬ್ಬರ,
ವಿಷ ಹಾಕಿ ಮಣ್ಣು ಕೊಂದೆವಲ್ಲೊ..!

ಮಗ ಬೆಳೆದು ಮಡದಿಗಾದ 
ಮಳೆ ಬಂದು ಮನೆಯುರಳಿ 
ಹೊಲವೆಲ್ಲ ಕಳೆಯಾತು..
ಬಾಳೆಲ್ಲ ತುಕ್ಕು ಹಿಡಯಿತಲ್ಲ
ಹೊಳೆಯುಕ್ಕಿ ಕೆಕೆ ಹಾಕಿತಲ್ಲ
ಮಳೆರಾಯ ಇನ್ನಾದರು 
ನಮ್ಮವರಿಗಾಗಿ ಸುರಿಯೋ..
 
ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...