Monday, October 19, 2020

* ನೇಗಿಲ ಯೋಗಿ *



ನೇಗಿಲು ಯೋಗಿ ಭೂಮಿಗೆ ಬಾಗಿ
ಬೆವರನು ಹರಿಸಿದ ಹಟ ಯೋಗಿ. // ಪ//

ನೇಗಿಲು ಹೊಡೆಯುತ ಮುಗಿಲನು 
ನೋಡುತ, ಜಗದುದರವ ತುಂಬುವ
ಯೋಗಿಯ ನೋಡು ಬಾ ಇಲ್ಲಿ //

ಭೂಮಿಯ ಉತ್ತವ ಎತ್ತುಗಳೆ ಜೋಡಿ 
ನಿತ್ಯ ಕಾಯಕ ಸುತ್ತ ದನಕರಗಳ ಹಾಡಿ 
ಸತ್ಯ ಕರ್ಮಯೋಗಿಯ ನೋಡಿಲ್ಲಿ//

ಹಗಲಲಿ ಸೂರ್ಯನೆ ಗೆಳೆಯ, ಜೊತೆ 
ನಡೆಯುವ ಇವನು ಸುಗ್ಗಿಯೆ ಇರಲಿ 
ಬರವೆ ಬರಲಿ ಸಂಬಂಧ ಕಲಿಬೇಕಿಲ್ಲಿ//

ಬಿಸಿಲಲಿ ಬೆಂದು ಬೆವರಿನ ಹನಿಯಲಿ
ಮಳೆಯನು ತಂದು, ಹಸುರಿನ ಸಾಲು
ಉಸಿರಲಿ ಎಣಿಸುವನು ನೋಡಿಲ್ಲಿ//

ಹರಕಲು ಹಚಡ ಮುರುಕಲು ವಸನ
ಹರವಾದ ಬದುಕು ಕಾಣುವುದು ಹಸನ
ಹೆಮ್ಮೆಯ ಬಾಳನು ಕಲಿಯಬೇಕಿಲ್ಲಿ//

        ಬಸನಗೌಡ ಗೌಡರ 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...