ಗಣೇಶಪಿತ ಗೌರಿಪತಿ ಗಂಗಾಧರ
ಭಂಗ ಬಂದರೆ ನೀ ಉಗ್ರ ತಾಂಡವ
ಬಡವ ನೀ ಶಿವ ಬಂಗಾರ, ಬೆಳ್ಳಿಯಿಲ್ಲ
ಬಟ್ಟೆಯಿಲ್ಲ ಬೂದಿಯೆ ಮೈಯಲ್ಲಾ //
ದೇಶಿವಾಸಿಗಳ ದೇವ ನೀ ಪರಶಿವ
ಸಿಂಧೂಬಯಲಿನಿಂದ ಮಹಾದೇವ
ಪಶುಪತಿಯಾಗಿ ಬೆಳೆದೆ ಆಗಿನಿಂದ
ನಾಮ ನೂರಾರು, ಹೇಳಲವು ಚಂದ//
ಕೈಯಲ್ಲಿ ತ್ರಿಶೂಲ ಅದರಲ್ಲಿ ಡಮರುಗ
ಕೈಲಾಸವಾಸಿ ಕವನಕೂ ನಿಲುಕದವನು
ಗಂಗೆಗೌರಿಯ ಅಂಗದಿ ಧರಿಸಿದವನು
ತ್ರಿನೇತ್ರಿ ತ್ರಿವೇಣಿ,ತ್ರಿಲೋಕ ಸಂಚಾರಿ//
ಮಸಣದ ವಾಸ ಹೊಸದೇನಲ್ಲ
ನಾಗರಿಕತೆ ಮೆಟ್ಟಲು ಮೂಲದೇವ
ನಿನ್ನ ರೂಪಕೆ ಮರುಳಾದವನು ನರ
ನೀನೊಲಿಯದಿರೆ ಎಲ್ಲಾ ಹರೊಹರ//
🖋️ಬಸನಗೌಡ ಗೌಡರ
Superr
ReplyDelete