Monday, October 5, 2020

* ನಟರು *

ಬ್ರಹ್ಮ ಬರೆದ ಕತೆಯ ಭಾವಿ ನಟರು
ನೀಡಿದ ಪಾತ್ರ ಮಾಡದೆ ಬೇಡುವರು /
ಆಡಿಸಿದಂತಾಡುವ ಗೊಂಬೆಗಳು
ಅರಿವಿಲ್ಲದೆ ಚಲಿಸುವವು ದಿನಗಳು//

ಪಾತ್ರ ಮೇಲು ಕೀಳೆನ್ನುವುದಿವರ ಭ್ರಮೆ
ಗೆದ್ದ ನಟರ ಸಿನಿಕತನದಲ್ಲಿವರ  ಸಂಭ್ರಮ/
ಗೆಲ್ಲುವ ಕುದುರೆಗಿವರು ಹಿಂಬಾಲಕರು 
ಹೂವು ತುರಾಯಿಗೆ ನಿತ್ಯಕಾಯುವರು//

ರಂಗಭೂಮಿ ದೂರ ನೂರು ಮಾರು 
ಆಸೆಯ ಅಳತೆಯು ಸಾವಿರ ಮಾರು/
ಗಡಿಯ ಗುರುತಿಗಾಗಿ ನಡೆದಿದೆ ಜಗಳ
ಗೆದ್ದರೇನು ? ಬದುಕಿಗೆ ಬೇಕು ಕವಳ//  

ಬಣ್ಣ ಬದಲಿಸಿ ಹಿರಿತನ ಬಯಸುವರು 
ಬಣ್ಣ ಜಾರಿದಾಗ ತಾನೆ ಬಯಲಾದರು/
ಬದುಕಿನ ಬಣ್ಣವು ನಿಜ ತಿಳಿಯದಣ್ಣ 
ದುಡಿದು ಪಡೆಯುವವರು ಹಿರಿಯರಣ್ಣ//

               🖋️ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...