Monday, January 11, 2021

* ವಿವೇಕ ಗುರುವಿಗೆ ನಮನ *

ಬೂದಿ ಬಡಕರ ದೇಶವೆಂದವರ 
ಪೂರ್ವಾಗ್ರಹ ಬುಡಮೇಲು ಮಾಡಿದ 
ಗಂಡೆದೆಯ ದೀರ ಸನ್ಯಾಸಿ ನಿನ್ನ 
ಧೈರ್ಯಕೆ ನನ್ನ ನಮನ ಗುರುವೆ //

ಶಿಕ್ಷಣವೆಂದರೆ ಅಕ್ಷರ ಜ್ಞಾನವೆಂದವರ
ಲಕ್ಷಣಗಳ ಬಯಲು ಮಾಡಿದ 
ಶೀಲವೆ ಶಿಕ್ಷಣವೆಂದ ಸನ್ಯಾಸಿ ನಿನ್ನ 
ಏಕಾಗ್ರತೆಗೆ ನನ್ನ ನಮನ ಗುರವೆ //

ನಾಗರಿಕತೆ ಬಟ್ಟೆಯಲ್ಲಳಿದವರ
ಹುಟ್ಟನೆ ಹಿಡಿದು ಜಾಲಾಡಿದ
ಗಟ್ಟಿ ಮಾತಿನ ದಿಟ್ಟ ಸನ್ಯಾಸಿ ನಿನ್ನ
ಪಟ್ಟುಗಳಿಗೆ ನನ್ನ ನಮನ ಗುರುವೆ // 

ಪಶ್ಚಿಮದ ಜ್ಞಾನ ಶ್ರೇಷ್ಠವೆಂದವರ
ಭೌತಿಕ ಜ್ಞಾನದ ಮೂಲ ಅರುಹಿದ
ಋಷಿ ಮುನಿ ಜ್ಞಾನಿಯೆ ನಿನ್ನ 
ಭಾರತೀಯತೆಗೆ ನಮನ ಗುರುವೆ //

ಸ್ವಾಮಿಗಳೆಂದು ಸೇವೆ ಬಯಸಿದವರ
ಸೇವೆಯ ಹೆಸರಿನ ಸ್ವಾಹ ತಿಳಿಸಿದ
ಶ್ರೀ ರಾಮಕೃಷ್ಣಾಶ್ರಮದ ನಿನ್ನ  
ನಿಜ ಸೇವಗೆ ನನ್ನ ನಮನ ಗುರವೆ //
 

             🖋️ಬಸನಗೌಡ ಗೌಡರ

1 comment:

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...