ಏರುವುದು ಹಾರುವುದು, ಒಮ್ಮೊಮ್ಮೆ
ಜಾರುವುದು, ತಾರುಣ್ಯದಾ ಗುಣ /
ಒಮ್ಮೊಮ್ಮೆ ಪುಟಿದೇಳುವುದು ಅರಿ,
ವಶಕ್ಕಾಗಿ ಸಿಡಿದೇಳುವ ಆಕ್ರಮಣ //
ಜಾರುವುದು, ತಾರುಣ್ಯದಾ ಗುಣ /
ಒಮ್ಮೊಮ್ಮೆ ಪುಟಿದೇಳುವುದು ಅರಿ,
ವಶಕ್ಕಾಗಿ ಸಿಡಿದೇಳುವ ಆಕ್ರಮಣ //
ತಡೆಯದಿರುವುದೆ ಬಿಸಿರಕ್ತದ ಗುಣ
ಬಿಸಿಯು ಕೆಸರಾಗಿ ಹೊಸ ಗಾಳಿ ಬೀಸಿ /
ಗೂಡಿಸುವುದು ಏರಿದ ಸ್ವಾಭಿಮಾನ,
ಕಳೆಯುವುದು ಕೊನೆಗೆ ಬಿಗುಮಾನ//
ಬೆಟ್ಟದ ಬುಡದಲ್ಲಿ ಹರಡಿದ ಕಲ್ಲು
ತಟ್ಟಿದ ಪೆಟ್ಟಿಗೆ ಕೆಟ್ಟೆನೆಂದರೆ ಸಲ್ಲ /
ಮೆಟ್ಟಿಲುಗಳಾಗುವುದು ಪಾಮರನಿಗೆ ,
ಜಟ್ಟಿಗೆ ಗುಂಡಾಗು ಏರುವೆ ಹೆಗಲಿಗೆ//
ಇಳಿಯುತ್ತಾ ಹೋದಾಗ ತಳಪಾಯ
ತಿಳಿಯುತ್ತ ಸಾಗುವುದು ಉಪಾಯ/
ಅವಮಾನ ತಿಳಿದಾಗ ಬಹುಮಾನ
ಅರಿತರೆ ಸಿಗುವುದು ಶಾಲು ಸನ್ಮಾನ//
ಮೂರ್ತಿಗೆ ಮುನ್ನ ಮಡಿ ಮಂತ್ರಗಳಿಲ್ಲ
ಮೈಲಿಗೆ ತಾಪತ್ರಯವಿಲ್ಲ ಬರಿ ಸ್ವಾತಂತ್ರ /
ಮಹತ್ಸಾದನೆ ಗೈದಾಗ ಎಲ್ಲಾ ಅತಂತ್ರ
ಗರ್ಭಗುಡಿಗಟ್ಟಿ ಹೇಳುವರು ಮಂತ್ರ //
No comments:
Post a Comment