Saturday, March 13, 2021

* ಎಳೆಯೋಣ ಬನ್ನಿ *

ಕನ್ನಡದ ದೇವಿ ಮುನ್ನಡೆಯುತಿಹಳು 
ಅನ್ಯರ ನುಡಿಯ ಭಿನ್ನತೆಯ ಮರೆತು
ಗಲ್ಲಿ ಗಲ್ಲಿಗಳಲ್ಲಿ ಕನ್ನಡದ ಕದರಿನ
ತೇರು ಎಳೆಯೊಣ ಬನ್ನಿ  //

ಕನ್ನಡದ ಕುವರರು ಸನ್ನಡತೆಯವರು
ಭಿನ್ನ ರಾಗದ ಕುನ್ನಿಗಳ ತಡೆದು 
ಸೊನ್ನಿಗೇಡಿಗಳ ತೊರೆದು, ಒಂದಾಗಿ
ತೇರು ಎಳೆಯೋಣ ಬನ್ನಿ//

ಉತ್ತರದ ಹುತ್ತಕ್ಕೆ ಹೆದರದವರು 
ಜೊತೆಯಾಗಿ ನಡೆವವರ ಪಡೆದು  
ಹತಭಾಗ್ಯರ ಹುರಿದು ಭಾರತಾಂಭೆಗೆ  
ಜೈಕಾರ ಹಾಕೋಣ ಬನ್ನಿ//

ಕನ್ನಡದ ನುಡಿ ಕನ್ನಡಿಯ ಗಂಟಲ್ಲ
ಚೆನ್ನುಡಿಯ ಕಲಿತು ಭಿನ್ನತೆಯ ಮರೆತು 
ಸಣ್ಣತನ ತುಳಿದು ಅನ್ನದ ಭಾಷೆಗೆ
ಬಿನ್ನಹ ಮಾಡೋಣ ಬನ್ನಿ //

ಅನ್ನಕ್ಕೆ ಬಂದವರು ಅರಸೊತ್ತಿಗೆ ತಂದಾರು
ಅರಿಯದ  ಮರುಳರಿಗೆ ಬರೆಯ ಎಳೆದು
ಅವನತಿಯ ಸೊಲ್ಲು ಕಳೆದು  ಸನ್ಮತಿಗೆ
ಜೈಕಾರ ಹಾಕೋಣ ಬನ್ನಿ//

ಕೆಲವಡಿ ಬಯಲಿನಲ್ಲಿ ಶ್ರೀರಂಗನ 
ಮಹಲಿನಲ್ಲಿ  ರಂಗು ರಂಗಿನ 
ಚಿತ್ತಾರ ಎಳೆದು ಸತ್ಯದ ತೇರಿಗೆ
ನಮಿಸೋಣ ಬನ್ನಿ  //


No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...