Sunday, March 14, 2021

ಮಹಾಮಳೆ

ಮಹಾಮಳೆ  ಮರಳಿ ಬಂತಲ್ಲೊ
ಮಹಾರಾಯ ಮೂರೇ ತಿಂಗಳು
ಮುರಾಬಟ್ಟಿ ಮಾಡೇ ಬಿಟ್ಟಿತಲ್ಲೊ
ಮಹಾನವಮಿ ದಸರಾ ಹುಸಿನಗಿ
ಮಹಾ ನಾಟಕ  ಮುಗಿದೆ ಇಲ್ಲಾ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//

ಮಹಾ ಮಳೆ ಮತ್ತೆ ಬಂತಲ್ಲೊ
ಹರಿದಾ ಒಡ್ದು  ಹಾಕೆ ಇಲ್ಲಾ
ಬಿದ್ದ ಮನೆ ಎದ್ದೆ ಇಲ್ಲ
ಮುರಿದ  ಮನಸು ಕೂಡೆ ಇಲ್ಲಾ
ಮಹಾ ಮಳೆ ಮತ್ತೆ ಬಂತಲ್ಲೊ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//

ಹರಗಿ ಹಸನ ಮಾಡೇನಂತ
ಕೂರಿಗೀ ಕುಂಟಿ ತಯಾರಿ ಯಾತಲ್ಲ
ಬದಕು ಕಟ್ಟುವ ಗುಂಗಿನಾಗ 
ಮುದಕರಂಗ ತಲೆ ಅಲಗಾಡತು
ಮಹಾಮಳೆ ಮತ್ತೆ ಬಂತಲ್ಲೊ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//

ಸಾಲಗಾರರಿಗೆ  ಗೆಲವೆ ಇಲ್ಲ
ಸಾವುಕಾರನಿಗೆ ಸೋಲೆ ಇಲ್ಲ
ಸವಲತ್ತುಗಳಿ ಬಡತನವಿಲ್ಲ
ತಂದು ಹಾಕುವವನಿಗೆ ನಿದ್ದೆ ಇಲ್ಲಾ
ಮಹಾಮಳೆ ಮತ್ತೆ ಬಂತಲ್ಲೊ
ಮುಗಿದೆ ಇಲ್ಲಾ ನಟನೆ ಮುಗಿದೇ ಇಲ್ಲಾ//








No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...