Saturday, April 10, 2021

* ಮತ್ತೆ ಚಿಗುರಿತು ಬನ *

ಹೊಸ ವರುಷ ಬಂತು 
ಹರುಷದ ಉಲ್ಲಾಸ ತಂತು
ಹೊಸ ಗಾನ ಹಾಡೋಣ ಬಾ //ಪ//

ಹಳತು ಹೊಸತರಲ್ಲಿ ಸೇರಿಸಿ
ಕೊಳೆತ ಶವಗಳನು ಸರಸಿ
ಹೊಸ ಏಣಿ ಏರೋಣ ಬಾ.. //

ಬೇವು ಬೆಲ್ಲದಲ್ಲಿ ಬೆರೆಸಿ 
ನೊವು ನಲುವಿನಲಿ ಮರೆಸಿ 
ಬನ ಚಿಗುರು ಸವಿಯೋಣ ಬಾ..//

ಹೊಂಗೆ ಹೂವಿನ ತಂಗಾಳಿ ಸೂಸಿ 
ಬೃಂಗದ ಝೇಂಕಾರ ಮನವರಳಿಸಿ
ಸಂಗೀತ ಕಲಿಯೋಣ ಬಾ..//

ಆದಿಯಲಿ ಅರಿವಿನ ಬೀಜವಿರಿಸಿ
ಅವನಿಯ ಅರಿ ಸೌದಿಯ ತೆಗೆಸಿ, 
ಧರಣಿಯ ಮಗನಾಗೋಣ ಬಾ..//

ಮಾಮರದ ಮುಗುಳು ಹೀರಿ 
ಮರಿ ಕೋಗಿಲೆಗಳ ಮಧರ ಗಾನ  
ನವಿಲೇರಿ ಕುಣಿಯೋಣು ಬಾ....//

ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...