18 ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬ್ರಿಟಿಷರಿಗೆ ಹೈದರಾಲಿ ಮತ್ತು ಟಿಪ್ಪುವಿನಿಂದ ಪ್ರತಿರೋಧ ಪ್ರಾರಂಭವಾಯಿತು ದೋಂಡಿಯಾ ವಾಘ,ಕಿತ್ತೂರು ರಾಣಿ ಚೆನ್ನಮ್ಮ ಸಂಗೊಳ್ಳಿರಾಯಣ್ಣರ ಹೋರಾಟಗಳು ಪ್ರಮಖವಾದವುಗಳು.
ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆ ನಂತರ ಬಾಂಬೆ ಪ್ರದೇಶ ಕಾಂಗ್ರೆಸ್ ಸಮಿತಿ ದಿನ್ ಷಾ ವಾಚಾರ ಅಧ್ಯಕ್ಷತೆ ಯಲ್ಲಿ ಬೆಳಗಾವಿಯಲ್ಲಿ, ಪಿರೋಜ ಷಾ ಮೆಹತಾ ರವರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲಿ ಅಧಿವೇಷನಗಳು ನಡೆದವು.ತಿಲಕರು ತಮ್ಮ ಮರಾಠಾ ಮತ್ತು ಕೇಸರಿ ಪತ್ರಕೆಗಳಿಂದ ಜನರನ್ನು ಉದ್ದೀಪನಗೊಳಿಸಿದರು ಮತ್ತು ಗಣೇಶೋತ್ಸವ ಮತ್ತು ಶಿವಾಜಿ ಜಯಂತಿಯನ್ನು ಉತ್ತರ ಕರ್ನಾಟಕದಲ್ಲಿ ಜನಪ್ರಿಯಗೊಳಿಸಿದರು
1916 ರಲ್ಲಿ ಹೋಮ್ ರೂಲ್ ಶಾಖೆಯನ್ನು ಧಾರವಾಡದಲ್ಲಿ ಸ್ಥಾಪನೆ ಮಾಡುವದರ ಮೂಲಕ ಹುಬ್ಬಳ್ಳಿ ಸಿರ್ಸಿ ಸಿದ್ಧಾಪುರ ಗಳಲ್ಲಿ ಚಳುವಳಿಯನ್ನು ಕ್ರೋಢೀಕರಿಸಲಾಯಿತು.
1920 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಥಮ ಅಧಿವೇಷನವನ್ನು ಧಾರವಾಡದಲ್ಲಿ ನಡೆಸಲಾಯಿತು, ಅಧ್ಯಕ್ಷತೆಯನ್ನು ಗಂಗಾಧರ ದೇಶಪಾಂಡೆ ವಹಿಸಿದ್ದರು, ಇವರನ್ನು ಕರ್ನಾಟಕದ ಕೇಸರಿ ಎಂದು ಕರೆಯುತ್ತಾರೆ ನಂತರ ಮಂಗಳೂರು ಬಿಜಾಪುರ, ಬಳ್ಳಾರಿಯಲ್ಲಿ ಅಧಿವೇಷನಗಳನ್ನು ನಡೆಸಲಾಯಿತು.
ಗಾಂಧೀಜಿಯವರ ಪ್ರಭಾವದಿಂದ ಕಾರ್ನಾಡ ಸದಾಶಿವರಾಯ,ಹೆಚ್ ಯಾಳಗಿ ಎನ್ ಎಸ್ ಹರ್ಡಿಕರ್ ಕಾಕಾ ಕಾಲೆಕರ ಅಸಹಕಾರ ಚಳವಳಿಯ ನಾಯಕತ್ವ ವಹಿಸಿದರು.ಎನ್ ಎಸ್ ಹರ್ಡಿಕರ್ 1924 ರಲ್ಲಿ ಹಿಂದೂಸ್ತಾನ ಸೇವಾ ದಳ ಸ್ಥಾಪಿಸಿದರು.ಇದೆ ವರ್ಷ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಷನದಲ್ಲಿ ಗಾಂಧೀಜಿಯವರು ಮದ್ಯಪಾನ ನಿಷೇದ ಹಾಗೂ ಅಶ್ಪೃಷ್ಯತಾ ನಿವಾರಣೆಗೆ ಕರೆಯಿತ್ತರು.
ಕಾಯಿದೆ ಭಂಗ ಚಳುವಳಿಯಲ್ಲಿ ಸಬರಮತಿಯಿಂದ ದಂಡಿಯವರೆಗೆ ನಡೆದ ಉಪ್ಪನ ಸತ್ಯಾಗ್ರಹ ದಲ್ಲಿ ಕರ್ನಾಟಕದಿಂದ ಮೈಲಾರ ಮಹದೇಪ್ಪ ಭಾಗಹಿಸಿದ್ದರು.ದಿವಾಕರ್,ಜಿ ದೇಶಪಾಂಡೆ, ಸದಾಶಿವ ರಾಯ ಅಂಕೋಲಾದಲ್ಲಿ ಉಪ್ಪು ತಯಾರಿಸಿ ಉಪ್ಪಿನ ಸತ್ಯಾಗ್ರಹ ಯಶಸ್ವಿಗೊಳಿದರು.
1938 ರಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ಯವರು ಶಿವಪುರದಲ್ಲಿ ಸಿಧ್ಧಲಿಂಗಯ್ಯನವರ ನೇತೃತ್ವದಲ್ಲಿ ತ್ರಿವರ್ಣ ದ್ವಜ ಹಾರಿಸಿದರು.ಅಲ್ಲದೇ ವಿಧುರಾಶ್ವಥ್ಥದಲ್ಲಿ ನಡೆದ ದ್ವಜಾರೋಹಣದಲ್ಲಿ ಬ್ರಿಟಿಷರ ಗೋಲಿಬಾರಿಗೆ 32 ಜನ ಬಲಿಯಾದರು ಹಾಗಾಗಿ ಈ ಘಟನೆಯನ್ನು ಕರ್ನಾಟಕದ ಜಲಿಯನ್ ವಾಲಾಬಾಗ ಎಂದು ಕರೆಯುತ್ತಾರೆ.
ಭಾರತ ಬಿಟ್ಟು ತೊಲಗಿ ಚಳುವಳಿಯನ್ನು ಕರ್ನಾಟಕದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು. ಈಸೂರ ಒಂದು ಶಿವಮೊಗ್ಗದ ಹಳ್ಳಿ ಬ್ರಿಟಿಷರಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು ಹಳ್ಳಿಯ ಜನ ಪಟೇಲ್ ಶಾನಭೂಗರ ಕಂದಾಯ ದಾಖಲೆಗಳನ್ನು ಕಸಿದುಕೊಂಡರು ಮತ್ತು ಪೋಲೀಸರ ಮತ್ತು ತಹಶೀಲದಾರರನ್ನು ಕೊಲೆಮಾಡಿದರು ಅವರನ್ನು ವಿಚಾರಣೆಗೊಳಪಡಿಸಿ ಗುರಪ್ಪ, ಮಲ್ಲಪ್ಪ, ಶಂಕರಪ್ಪ,ಸೂರ್ಯನಾರಾಯಣಾಚಾರ್ಯರನ್ನು ಗಲ್ಲು ಶಿಕ್ಷೆಗೆ ಒಳಪಡಿಸಿದರು. ಹೀಗೆ ಭಾರತದ ಸ್ವಾತಂತ್ರ್ಯ ದೊಂದಿಗೆ 1947 ರಲ್ಲಿ ಮೈಸೂರು ಭಾರತದಲ್ಲಿ ಸೇರಿತು.
No comments:
Post a Comment