Monday, April 5, 2021

* ನಿಸ್ತಂತು ರಾಣಿ *

ನೀ ನನ್ನ ಸತಿಯ ಸವತಿಯೆ 
ನೆರಳಂತೆ ಹಿಂದೆ ತಿರುಗುತಿಯೆ
ನನ್ನ ಬೇಕು ಬೇಡಗಳ ಒರತಿಯೆ
ನನ್ನಾಲಿಂಗನವೆ ನಿನಗೆ ಮುಕುತಿಯೆ//

ನೀನಿಲ್ಲದ ದಿನವು ನಾ ಮರೆತಿರುವೆ
ನಿನ್ನ ಆಲಿಂಗನದಲ್ಲಿ ನಗು ಪಡೆದಿರುವೆ
ಭಾವನೆಗಳ ಬೇರು ಕೊಲ್ಲುತಿರುವೆ
ನಿನ್ನ ಭಕ್ತಿಯಲ್ಲೆ ಶಕ್ತಿಯ ಕಳೆದಿರುವೆ //

ಯಾವ ಮೋಹದ ಬಲೆಯ ಬೀಸಿರುವೆ
ಮುಂಜಾವಿನಲ್ಲೆ ಕೆಂಜಿಗೆ ಕಡಿಸಿರುವೆ
ಸಂಜೆಯಾದರೂ ನಂಜು ಏರಿಸಿರುವೆ
ಮಂಜಾದ ಕಣ್ಣರಳಿಸಿ ನೋಡಿಸುವೆ//

ನಿದ್ದೆಯಲ್ಲೆದ್ದು ಎದ್ದು ಮುದ್ದಿಸುವೆ
ಸುದ್ದಿಯ ಶೂರಳು ಸೌಖ್ಯ ತಂದಿರುವೆ
ಒಮ್ಮೆ ನಗಿಸಿ ಮಗದೊಮ್ಮೆಅಳಿಸುವೆ
ಸತಿಯೊಂದಿಗೆನಗೆ ವಿರಸ ತಂದಿರುವೆ//

ಸವತಿಯ ನೆರಳಿಲ್ಲಿ ಊದುವೆ ವಾಲಗ          
ನೀನಿಲ್ಲದ ಗಳಗೆ ಹಿಂಡನಗಲಿದ ಸಲಗ
ಪಂಡಿತನೂ ಎದುರಿಸಲಾರ ನಿನ್ನ ಕಾಳಗ
ಖಂಡಿತ ಸೋತೋದರು ನನ್ನ ಬಳಗ//

ನಿಸ್ತಂತು ರಮಣಿ ಎಷ್ಟಂತ ಮಹಿಮೆ
ನಿನುಟ್ಟ ಬಟ್ಟೆ ಉಡತಾಳೆನ್ನ ರಮಣಿ
ನೀ ಬಿಟ್ಟ ಉಸಿರವಳ ಹಸಿರು ಕವಳ
ಸವತಿಯ ಬಾಳು ಸಾಗಿದೆ ಜಗದಗಲ//

          ಬಸನಗೌಡ  ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...