Thursday, April 15, 2021

* ಹಾದಿ ಬದಲಿಸಿದ ಹೈದ *

ಕಲ್ಲು ಮುಳ್ಳಿನ ಕವಲು ದಾರಿ  
ಬಲ್ಲವರು ಬೈದುದೆಲ್ಲವ ಸ್ವೀಕರಿಸಿ 
ಎಲ್ಲೆ ಮೀರದೆ ತನ್ನ ವಲವ ತೋರಿಸಿ 
ಎಲ್ಲವನ್ನೂ ನುಂಗಿದವನು ಈ ಹೈದ //

ಎತ್ತು ಎಮ್ಮೆ ಕತ್ತೆ ಕೋಣಗಳೆ ನಿತ್ಯ 
ಗೆಳೆಯರಿವನ, ಸತ್ಯದ ದಾರಿ ತುಳಿದ
ಮಿತ್ಯವನರಿಯದೆ ಎಲ್ಲರನು ಗೌರವಿಸಿ
ಸತ್ಪಾತ್ರಕೆ ಸವೆದವನು ಈ ಹೈದ//
ಹಾವಿನೊಂದಿಗೆ ಸರಸ ಚೇಳಿನೊಂದಿಗೆ 
ವಿರಸ, ರಕ್ತ ಸಂಬಂಧಿಗಳೆ ರಣವಿಳ್ಯ
ಸೌಖ್ಯ ಕಾಣದ ರಾತ್ರಿಗಳನು ಸಹಿಸಿ 
ಶಾಲೆಯ ದಾರಿ ತುಳಿದ ಈ ಹೈದ//

ಗುರುವಿನ ಗರಡಿಯ ನಗಾರಿ ಬಾರಿಸಿ
ಗುರಿ ಹಿಡಿದ ಬಾಲಕರ ಹಿಂಬಾಲಿಸಿ
ಗೆಳೆಯರ ಗತ್ತಿನಿ ಗಡಿಯನ್ನು ಕತ್ತರಿಸಿ
ಶಿರಬಾಗಿ ಅರಿತವನು ಈ ಹೈದ//

ಹಳೆಯಂಗಿ ಬಿಗಿದ ಚೊಣ್ಣ,ಕಿರಿದು 
ಚಪ್ಪಲಿ ಒಳಗೆ ಇಣುಕಿ ಮುತ್ತಿಕ್ಕುವ 
ಮೊಳೆಗಳು, ಮೌನವ ಆರಾಧಿಸಿ
ಮಾತು ಮನನ ಮಾಡಿದ ಈ ಹೈದ// 

ಮಾಳಿಗೆಯೆ ಪಲ್ಲಂಗ ಹರಿದ ಕೌದಿಯೆ
ರಜಾಯಿ ಬೀಸುವ ಗಾಳಿಯೆ ಎಸಿ 
ಓಣಿಯ ದೀಪವೆ ಮಾರ್ಗದರ್ಶಿ 
ಬುದ್ದ ಬಸವನ ಆದರ್ಶವೆ ಈ ಹೈದ//

ಬದಲಿಸಲು ಕಾನ್ವಂಟಗಳೆ ಬೇಕಿಲ್ಲ
ಬವಣೆ ಕಲಿಸುವವು ನೂರು ದಾರಿ 
ಬದಲಿಸಲು ಬೇಕು ಕಾಲಿ ಉದರ 
ಪದವರಿತು ಹದವಾದ ಈ ಹೈದ //


          ಬಸನಗೌಡ ಗೌಡರ 

             ಉಪನ್ಯಾಸಕರು

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...