Thursday, April 22, 2021

* ತೊರೆಯದೆ ಏರಬಹುದೆ ಏರಿಗೆ *

ಕಂಥಕವನೇರಿ ನಡು ಇರುಳ ಸೇರಿ 
ಜಗದಳುವ ತಿಳಿಯಲು ನಿನ್ನ ಸವಾರಿ
ವೃದ್ದ ,ರೋಗಿ, ಶವ, ಸನ್ಯಾಸಿ ನೋಡಿ  
ಸನ್ನಿವೇಶಗಳೆ ಮನದಲಿ ಸುಳಿದಾಡಿ
ಸತ್ಯ ವರಿಯಲು ಸನ್ಯಾಸಿ ಪಯಣ //

ಮೈಯಲ್ಲ ಹಣ್ಣಾಗಿ ಕಣ್ಣು ಮಂಜಾಗಿ
ಬಾನದಂತೆ ನಡಬಾಗಿ, ರಕ್ತ ನೀರಾಗಿ 
ದಂತ ಹೊರ ಬಾಗಿ, ಚರ್ಮ ಸುಕ್ಕಾಗಿ
ಕಾಣದು ಸತ್ಯ,ನಿಂತ ತಲೆತಿರುಕನಾಗಿ
ಕಠೋರ ತಪಸ್ಸಿಗಾಗಲಿಲ್ಲ ಯೋಗಿ//

ತುಳಿದ  ಹೊಸದು ಮಧ್ಯಮ ದಾರಿ
ಕುಳಿತ ಗಯಾದ ಅರಳಿಮರದ ಕೆಳಗೆ
ಅರಳಿತು ತನ್ನೊಳಗೆ ಜ್ಞಾನದ ಬೆಳಕು 
ರಾಹುಲ ಯಶೋಧೆಯ ತೊರೆಯದೆ
ಹೇಗಾಗುತ್ತಿದ್ದ ಸಿದ್ದ ಗೌತಮ ಬುದ್ಧ  //

ಮಹಾಪರಿತ್ಯಾಗದಿಂದಾದ ತಥಾಗತ
ಧರ್ಮ ಚಕ್ರವುರುಳಿತು ಭರತಖಂಡ 
ದಾಟಿ ಚೀನಾ ಸಿಲೋನ ತುಂಬಾ 
ಅರಳಿತು ಧರ್ಮ ಚಕ್ರ ಪ್ರವರ್ತನ 
ಬೆಳಕಾಯಿತು ಏಷಿಯಾ ತುಂಬಾ //
 
ದುಃಖ ಸಹಜ ಆಸೆಗುದುರೆ ಏರಿದಾಗ 
ಅಷ್ಟ ಮಾರ್ಗ ಕಷ್ಟವೇನು ಆಸೆ ತೊರೆದಾಗ
ಅರಿತು ತುಳಿಯಲೇಳಿದ ಸನ್ಮಾರ್ಗದ ದಾರಿ
ಸತ್ಯ ಅಹಿಂಸೆ ಹಿಡಿದು ನಡೆದಾಗ ಜಯಭೇರಿ
ಇದೆ ನೀನು ಹೇಳಿದ ಸಿದ್ಧ ಬುದ್ಧ ರಹದಾರಿ//

              ಬಸನಗೌಡ ಗೌಡರ 

 

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...