Monday, April 19, 2021

* ಪತಿ ಪರದೈವ *

ಭರವಸೆಗಳ ಬೆನ್ನು ಬಿದ್ದು, 
ಭವಿಷ್ಯದ ಬೆಳೆ ಬೆಳೆಯುವ 
ಭಾವನಾ ಜೀವಿ .ಈ ಮಹಿಳೆ.
ಬಿತ್ತುವ ಬೀಜಗಳ ನಂಬಿ ಬದುಕು 
ಕಟ್ಟಿದ ಭಾರತೀಯ ನಾರಿ 
ಸಂತೋಷದ ದಾರಿ ....
ಅಂದು ಇಂದು ಎಂದೆಂದೂ  ... !
ಸುಳ್ಳುಗಳನೆ ನಂಬಿ ಬಳ್ಳವನು ತುಂಬಿ 
ಸಂಸಾರ ದಡ ಸೇರಿಸುವ 
ಅಂಬಿಗಳೆ ಈ ಮಹಿಳೆ  . 
ಡೋಣಿ ತೂತಾದರು 
ದಡ ಸೇರಿಸುವ ಧಣಿವರಿಯದ 
ಕ್ಷಮಯಾಧರಿತ್ರಿ
ಮಣಿ ಪೋಣಿಸಿದಂತೆ 
ಸುಳ್ಳಿನ ಸರಮಾಲೆ ಇವಳಿಗೆ ಓಲೆ
ನಂಬಿದ ಗಂಡನೆನ್ನವ ಪ್ರಾಣಿ 
ನಿತ್ಯ ಯಾಮಾರಿಸಿದರೂ 
ಪತಿಯೆ ಪರದೈವ ...ಸತಿಗೆ ನೀಡುವನು  
ಕಾಲಿಗೊಂದು ಕೈಗೊಂದು 
ಮತ್ತೆ ಮಡಿಲಿಗೊಂದು ತಪ್ಪಿದರೆ ಜೋಕೆ, 
ಅಣುವಿದಳನ. ಸಮ್ಮಿಳನದಿಂದ 
ಹೊರಬರಲಿ ರವಿ ಕಿರಣ

ಬಸನಗೌಡ ಗೌಡರ 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...