Friday, April 23, 2021

* ಆಲಯ, ಗ್ರಂಥಾಲಯ .*.

ಮರೀಬೇಡ ಗ್ರಂಥ 
ನೀನಿರಬೇಕು ಜೀವಂತ....!
ಓದಬೇಕು ನೀ ಗುಣವಂತ.
ಬರಿ ಆಲಯವಲ್ಲ, ಪುಸ್ತಕದ ಕಂತೆ
ಇದು ಜ್ಞಾನ ಕೊಳ್ಳುವ ಸಂತೆ//

ದೇಹವಿಲ್ಲದ ಜೀವವಿರುವ             
ಸಾವಿರ ಸಂತರ ಮಕರಂದ
ಮಸಣಕೆ ಹೋಗುವ ಮುನ್ನ 
ಮಾಡಿಕೊ ಅವರನು ನಿನ್ನ ಕಾಂತ
ಸಂತೋಷ ತರುವದು ಏಕಾಂತ// 

ನೂರು ಗೆಳೆಯರ ನೂಕಾಚೆ 
ಸಾವಿರ ವೈರಿಗಳ ಸರಿಸು ಆಚೆ 
ಸಾವಿಲ್ಲದ ಅರಮನೆ ಬಾಚೀಚೆ
ಸ್ವರ್ಗದ ಮನೆ ಇರವುದೆ ಈಚೆ..! // 

ಪುಸ್ತಕದ ದಿನ ಮಾಡಿಹರು 
ಮಸ್ತಕಕೇರಿಸದ ಸೋಗಲಾಡಿಗಳು
ಸುಟ್ಟು ಸುಣ್ಣವಾಗುವ ಮೊದಲು
ಕಟ್ಟು ಸುಂದರ ಅರಿವಿನ ಮಹಲು//

ಸಾವಿರ ಜೀವಗಳ ಸೇರಿಸಿ ಹೆಣೆದರು 
ಸುಂದರವಾದ ಮಂದಿರ ಅದುವೆ ಹಂದರ
ನಮ್ಮ ರಾಮ ರಹಿಮ ಸಂತರ ಮಂದಿರ
ಸಂತರ ಸವಿನುಡಿಯ ಬೆಳಕಿನ ಚಂದಿರ //

             ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...